ಕೆಜೆಪಿ ಅಭ್ಯರ್ಥಿ ಶೋಭಾ ಲಮಾಣಿ ಪ್ರಚಾರಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 15
ಕೆಜೆಪಿ ಅಭ್ಯರ್ಥಿ ಶೋಭಾ ಲಮಾಣಿ ಭಾನುವಾರು ಬೆಳಗ್ಗೆ ಪಟ್ಟಣದ ಸೋಮೇಶ್ವರ ದೇವಸ್ಥಾನಕ್ಕೆ ಹಾಗೂ ದೂದಪೀರಾ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾ ಲಮಾಣಿ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿ, ಬಳಿಕ ಮಾತನಾಡಿದ ಅವರು, ಇದೊಂದು ಬಾರಿ ನಮ್ಮ ಪಕ್ಷಕ್ಕೆ ತಮ್ಮ ಅಮೂಲ್ಯ ಮತ ನೀಡಿ ಬೆಂಬಲಿಸಬೇಕು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಾಧನೆಗಳನ್ನು ಗಣನೆಗೆ ತೆಗದುಕೊಂಡು ತಾವುಗಳು ತಮ್ಮ ಮತ ಚಲಾಯಿಸಿರಿ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದ್ದು, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಉತ್ತಮ ಆಡಳಿತವನ್ನು ನೀಡಿ, ಜನರ ಸಂಕಷ್ಟ, ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇವೆ ಎಂದರು. ಸುಡುವ ಬಿಸಿಲನ್ನು ಲೆಕ್ಕಿಸದೇ ಶೋಭಾ ಲಮಾಣಿ ಪಟ್ಟಣದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ಗದಗ ಜಿಲ್ಲಾ ಕೆಜೆಪಿ ಉಪಾಧ್ಯಕ್ಷ ಶಿವಣ್ಣ ಮಹಾಂತಶೆಟ್ಟರ, ಶಿರಹಟ್ಟಿ ತಾಲೂಕು ಕೆಜೆಪಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಪ್ರೇಮ ಶೇಠ, ಡಾ. ಎಂ.ಎನ್. ವಡಕಣ್ಣವರ, ಮಲ್ಲಿಕಾರ್ಜುನ ಅಂಕಲಿ, ಎಸ್.ಸಿ. ಪಾಟೀಲ, ಶಿವಣ್ಣ ಡಂಬಳ, ಗಣೇಶ ಬೆಳವಿಗಿ, ಚಂದ್ರು ಲಮಾಣಿ, ಬಸವರಾಜ ಅಕ್ಕೂರ, ಕಾರಡಗಿ, ಬೋಮಲೆ, ಮಲ್ಲೇಶ ಲಕ್ಕಣ್ಣವರ, ಗಂಗಾಧರ ಕುರಡೇಕರ, ಬ್ಯಾಮಣ್ಣ ಲಮಾಣಿ, ರಮೇಶ ಲಮಾಣಿ, ಕಿರಣ ಲಮಾಣಿ, ಸೋಮಶೇಖರ ದೊಡ್ಡಮನಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

