ಚಿತ್ರಕಲೆಯಿಂದ ಒಳ್ಳೆಯ ಮನಸ್ಸು: ತೋಂಟದ ಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಏ. 16
ಚಿತ್ರಕಲೆಯು ಸಮಾಜದಲ್ಲಿ ಒಳ್ಳೆಯ ಮನಸ್ಸುಗಳನ್ನು ನಿರ್ಮಾಣ ಮಾಡುತ್ತದೆ ಎಂದು ಜ. ತೋಂಟದಾರ್ಯಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಸೋಮವಾರ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿರುವ ಜೆ.ಎನ್. ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಗದಗ ಜಿಲ್ಲಾ ದೃಶ್ಯ ಕಲಾವಿದರ ಸಂಘ ಗದಗ ಹಾಗೂ ಕರ್ನಾಟಕ ಲಿಲಿತ ಕಲಾ ಅಕಾಡೆಮಿ ಬೆಂಗಳೂರು ಇವುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕಲಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗದಗ ಜಿಲ್ಲೆಯ ಚಿತ್ರಕಲಾವಿದರು ದೇಶದ ವಿವಿಧೆಡೆ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗದುಗಿನಲ್ಲಿ ಓದಿದ ಚಿತ್ರಕಲಾವಿದರು ಗುರುತಿಸಿಕೊಂಡಿದ್ದಾರೆ. ಇದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯ. ಲಿಯೋನಾರ್ಡ್ ಡಾ ವಿಂಚಿ ಜನ್ಮದಿನವನ್ನು ವಿಶ್ವಕಲಾ ದಿನಾಚರಣೆಯಾಗಿಸಿರುವುದು ಬಹಳ ಸೂಕ್ತವಾಗಿದೆ. ಚಿತ್ರಕಲೆಗೆ ಬಹಳ ದೊಡ್ಡ ಇತಿಹಾಸವಿದೆ. ಸರ್ಕಾರ ಇದನ್ನು ಅರಿತು ಚಿತ್ರಕಲಾವಿದರ, ಚಿತ್ರಕಲಾ ಕ್ಷೇತ್ರದ ಏಳ್ಗೆಗೆ ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶೋಕ ಅಕ್ಕಿ ಹಾಗೂ ಡಾ. ಬಿ.ಎಲ್. ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಅಕ್ಕಿ, ಎಲ್ಲ ಚಿತ್ರಕಲಾವಿದರು ಸಂಘಟನೆಗೊಳ್ಳಬೇಕು. ಕಲೆಯ ಬೆಳವಣಿಗೆ ಮತ್ತು ಕಲಾವಿದನ ಬೆಳವಣಿಗೆಗೆ ಪ್ರೋತ್ಸಾಹ ಸಿಗುವಂತಾಗಬೇಕು ಎಂದರು. ಹಂಪಿ ವಿವಿಯಲ್ಲಿ ಪಿಎಚ್ಡಿ ಪಡೆದ ಡಾ. ಬಿ.ಎಲ್. ಚವ್ಹಾಣ ಮಾತನಾಡಿ. ಚಿತ್ರಕಲಾವಿದರು ಹೆಚ್ಚಿನ ವ್ಯಾಸಂಗ ಮಾಡಬೇಕು. ಚಿತ್ರಕಲೆಗೆ ವಿಶ್ವ ಮಾನ್ಯತೆಯಿದೆ. ವಿಶ್ವ ಭಾಷೆ ಇದಾಗಿದೆ. ಚಿತ್ರಕಲೆಯ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಯಾಗಬೇಕು. ಚಿತ್ರಕಲೆ ಜನ ಸಾಮಾನ್ಯರಿಗೂ ತಲುಪುವಂತೆ ಇಂದಿನ ಯುವ ಕಲಾವಿದರು ಚಿತ್ರಕಲೆಯ ಬಗ್ಗೆ ಪರಿಪೂರ್ಣ ಜ್ಞಾನ ಬೆಳೆಸಿಕೊಂಡು ಶ್ರಮಿಸಬೇಕು ಎಂದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ, ಕೆ.ಎಂ. ಕೃಷ್ಣಾ, ಕೆ.ವಿ. ಕುಂದಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು, ಚಿತ್ರಕಲಾ ಉಪನ್ಯಾಸಕರು ಪಾಲ್ಗೊಂಡಿದ್ದರು. ಪ್ರೇಮಾ ಹಂದಿಗೋಳ ಸ್ವಾಗತಿಸಿದರು. ವಿಜಯ ಕಿರೇಸೂರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

