ಗದಗ

ಮುಳಗುಂದ: ಮಹಿಳೆಯರು ಕೆಜೆಪಿ ಸೇರ್ಪಡೆ

Published On :

ಮುಳಗುಂದ: ಮತದಾನ ಮಾಡುವಾಗ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸರಳ ಸಜ್ಜನಿಕೆಯ ಕೆಜೆಪಿಯ ಗದಗ ಮತಕ್ಷೇತ್ರದ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಅವರನ್ನು ಮತ ನೀಡಿ ಬೆಂಬಲಿಸುವಂತೆ ಗದಗ ಜಿಲ್ಲಾ ಕೆಜೆಪಿ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಗಡಿ ಮನವಿ ಮಾಡಿಕೊಂಡರು.
ಈಚೆಗೆ ಅವರು ಪಟ್ಟಣದ ವಿಜಯಲಕ್ಷ್ಮೀ ಆಯಿಲ್ ಮಿಲ್‌ನಲ್ಲಿ ನಡೆದ ಕೆಜೆಪಿ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಂಕಣ್ಣವರ ಅವರನ್ನು ಬೆಂಬಲಿಸುವ ಮೂಲಕ ಈ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಯಡಿಯೂರಪ್ಪನವರ ಕೈ ಬಲಪಡಿಸಬೇಕಾಗಿದೆ. ಅವರು ಸಿಎಂ ಆದ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಯೋಜನೆಗಳಂತಹ ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಇನ್ನೂ ಹೆಚ್ಚಿನ ಜನಸೇವೆ ಮಾಡಲು ಕೆಜೆಪಿ ಪಕ್ಷದ ಅಭ್ಯರ್ಥಿಗಳನ್ನು ಜನತೆ ಮತನೀಡಿ ಗೆಲ್ಲಿಸಬೇಕು ಎಂದರು.
ಸಭೆಯಲ್ಲಿ ಗದಗ ತಾಲೂಕು ಮಹಿಳಾ ಅಧ್ಯಕ್ಷೆ ಪೂಜಾ ಬೇವೂರ ಮಾತನಾಡಿದರು. ಗದಗ ಜಿಲ್ಲಾ ಮಹಿಳಾ ಕೆಜೆಪಿ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಗಡಿ ಸಮ್ಮುಖದಲ್ಲಿ ನೂರಾರು ಮಹಿಳೆಯರು ಕೆಜೆಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮುಳಗುಂದ ಮಹಿಳಾ ಘಟಕದ ಅಧ್ಯಕ್ಷೆ ಶಂಕ್ರಮ್ಮ ಪೂಜಾರ, ಉಪಾಧ್ಯಕ್ಷೆ ಜಯಶ್ರೀ ಹಡಪದ, ಕಾರ್ಯದರ್ಶಿ ಬಂಗಾರೆವ್ವ ಚಳ್ಳೆನವರ, ಮಾಲಾ ಚಳ್ಳೆಣ್ಣವರ, ದ್ರಾಕ್ಷಾಯಣಿ ಹೀರೆಮಠ, ನೀಲಮ್ಮ ಹೀರೆಮಠ, ಕಮಲಮ್ಮ ಬಗವಂತಿ, ಲಕ್ಷ್ಮವ್ವ ಕೆಂಚನಾಯ್ಕರ, ಪರ್ವಿನಾ ಡಾಲಾಯತ್, ಫಾತಿಮಾ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.