ಗದಗ

ಸೂಚಕರಿಂದ ಸಿ.ಸಿ. ಪಾಟೀಲ ನಾಮಪತ್ರ ಸಲ್ಲಿಕೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಏ. 17
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಶಾಸಕ ಸಿ.ಸಿ. ಪಾಟೀಲರ ನಾಮಪತ್ರವನ್ನು ಸೂಚಕರ ಮೂಲಕ ಸಾವಿರಾರು ಕಾರ್ಯಕರ್ತರು, ಸಚಿವ ಕಳಕಪ್ಪ ಬಂಡಿ, ಸಂಸದ ಪಿ.ಸಿ, ಗದ್ದಿಗೌಡ್ರ, ಗದಗ ಶಾಸಕ ಶ್ರೀಶೈಲಪ್ಪ ಬಿದರೂರು ಹಾಗೂ ಸಿ.ಸಿ. ಪಾಟೀಲರ ಸದಸ್ಯರೊಂದಿಗೆ ತೆರಳಿ ಸಲ್ಲಿಸಲಾಯಿತು.
ಪಟ್ಟಣದ ದಂಡಾಪುರ ಓಣಿಯ ಉಡಚಮ್ಮದೇವಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಾಗಿತು. ತಾಲೂಕಿನ ಗ್ರಾಮಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಚಕ್ಕಡಿಗಳು ಮೆರುಗು ನೀಡಿದವು. ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಪಾಟೀಲರಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದ್ದು ಅಭಿಮಾನಿಗಳಲ್ಲಿ ಹರ್ಷಕ್ಕೆ ಕಾರಣವಾಯಿತು.
ಕೆಲವು ಕಾರ್ಯಕರ್ತರು ಮಾತನಾಡಿ, ನರಗುಂದ ಬಂಡಾಯದ ಮೂಲಕ ಇತಿಹಾಸದಲ್ಲಿ ದಾಖಲಾಗಿದೆ. ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ. ನಾವು ಚುನಾವಣೆ ಮಾಡುತ್ತೇವೆ. ನೀವು ನಮ್ಮ ಕ್ಷೇತ್ರದ ಹುಲಿ. ಚಿಂತೆ ಮಾಡಬೇಡಿ ಎಂದು ತಮ್ಮ ನಾಯಕರಿಗೆ ಆಶ್ವಾಸನೆ ನೀಡಿದರು. ಬಾಗಲಕೋಟೆ ಸಂಸದ ಪಿ.ಸಿ. ಗದ್ದಗೌಡರ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡರ, ಹೊನ್ನಪ್ಪಗೌಡ ಪಾಟೀಲ ಮಾತನಾಡಿದರು.
ಕ್ಷೇತ್ರದ ಲಕ್ಕಂಡಿ, ಕೊಣ್ಣೂರ, ಭೈರನಹಟ್ಟಿ, ಮುದ್ಗುಣಕಿ, ಹದಲಿ, ಹಿರೇಕೊಪ್ಪ ಗ್ರಾಮಗಳಿಂದ 500ಕ್ಕೂ ಹೆಚ್ಚು ಜನರು ವಿವಿಧ ಪಕ್ಷಗಳನ್ನು ತ್ಯಜಿಸಿ ಬಿಜೆಪಿ ಸೇಪರ್ಡಗೊಂಡರು. ಜಿಪಂ ಅಧ್ಯಕ್ಷ ಎಂ.ಎಸ್. ಕರಿಗೌಡರ, ಅಶೋಕ ನವಲಗುಂದ, ಬಿ.ಎಸ್. ಉಪ್ಪಾರ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷೆ ಗುರುದೇವಿ ಶಾನವಾಡಮಠ, ವಿ.ಎನ್. ಕೊಳ್ಳಿಯವರ, ಸಿ.ಎಸ್. ಪಾಟೀಲ, ಆರ್.ಎನ್. ಪಾಟೀಲ, ಪ್ರಭುಣ್ಣ ಹುಣೆಸಿಕಟ್ಟಿ, ವಾಸು ಜೋಗಣ್ಣವರ, ಬಿ.ವೈ. ಪಾಟೀಲ, ಚಂದ್ರು ದಂಡಿನ, ಶೋಭಾ ಪಾಟೀಲ, ಶಿವಲೀಲಾ ಕೊಳ್ಳಿ, ಸುಕನ್ಯಾ ಸಾಲಿ, ಶೈಲಾ ನರಗುಂದ, ಉಮೇಶಗೌಡ ಪಾಟೀಲ, ಬಿ.ಬಿ. ಐನಾಪುರ, ಚಂಬವ್ವ ಪಾಟೀಲ, ಅನಿಲ ದರಿಯಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರಶೇಖರ ಕೋಟಿ, ಶಿವಾನಂದ ಮುತ್ತವಾಡ, ಉಮೇಶ ಕುಡೇನ್ನವರ, ಚಂದ್ರು ಪವಾರ, ಉಮೇಶ ಮೊರಬದ, ಎಲ್.ಎಂ. ಪಾಟೀಲ, ಸುರೇಶ ಹುಡೇದಮನಿ, ಎಸ್.ಬಿ. ಕರಿಗೌಡರ, ರಾಜುಗೌಡ ಪಾಟೀಲ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.