ಬಿಎಸ್ಸಾರ್ನಿಂದ ಅನಿಲ ಮೆಣಸಿನಕಾಯಿ ಉಮೇದುವಾರಿಕೆ
ಕನ್ನಡಪ್ರಭ ವಾರ್ತೆ, ಗದಗ, ಏ. 17
ಗದಗ ವಿಧಾನಸಭಾ ಮತಕ್ಷೇತ್ರದ ಬಿಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಗದಗ ವಿಧಾನಸಭಾ ಮತಕ್ಷೇತ್ರದ ಕಲ್ಲೂರ ಗ್ರಾಮದ ಹೊನ್ನತ್ತೆಮ್ಮನ ದೇವಸ್ಥಾನ ಸೇರಿದಂತೆ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯಾಪ್ತಿಯ ಬಹುತೇಕ ದೇವಾಲಯಗಳಲ್ಲಿ ಹಾಗೂ ನಗರದ ಜುಮ್ಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅನಿಲ ಮೆಣಸಿನಕಾಯಿ, ನಂತರ ನಗರದಲ್ಲಿ ತೆರೆದ ವಾಹನದ ಮೂಲಕ ಗದಗ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಗಮನ ಸೆಳೆದ ಯುವಕರು: ಬಿ.ಎಸ್.ಆರ್. ಸಂಸ್ಥಾಪಕ ಬಿ.ಶ್ರೀರಾಮುಲು ಗದಗ ನಗರದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ, ಅದರಲ್ಲಿಯೂ ಯುವಕರು ಹೆಚ್ಚಾಗಿ ಶ್ರೀರಾಮುಲು ಅವರನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಬುಧವಾರದ ಮೆರವಣಿಗೆ ಸಾಕ್ಷಿಯಾಯಿತು. ಮೆರವಣಿಗೆಯಲ್ಲಿ 8 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ಮೂಲಕ ಬಳ್ಳಾರಿಗಿಂತ ಗದಗ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಭಾವವನ್ನು ಹೊಂದಿರುವುದು ಸಾಕ್ಷಿಯಾಯಿತು.
ಡೊಳ್ಳಿನ ಮೇಳ, ಜಾಂಜ್ ಮೇಳ, ಕುಂಭಮೇಳದೊಂದಿಗೆ ನಡೆದ ಮೆರವಣಿಗೆಯು ನಗರದ ಮಹಾತ್ಮಗಾಂಧಿ ವೃತ್ತ, ಡಾ. ಬಾಬಾಸಾಹೇಬ ಅಂಬೇಡ್ಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಕಿತ್ತೂರ ಚನ್ನಮ್ಮ ವೃತ್ತದ ಮೂಲಕ ಗದಗ ಉಪವಿಭಾಗಧಿಕಾರಿ ಕಚೇರಿಗೆ ತೆರಳಿದರು. ಮೆರವಣಿಗೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಟಿ. ಮೇಲಗೇರಿ, ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ, ಮಲ್ಲಿಕಾರ್ಜುನ ಐಲಿ, ಸಂತೋಷ್ ಮೇಲಗೇರಿ, ಬಸವರಾಜ ಕೋಟೆ, ಕಾಂತೇಶ ಹಾನಗಲ್, ಮಂಜುನಾಥ ಮ್ಯಾಗೇರಿ, ಬಸವಣ್ಣೆಯ್ಯ ಹಿರೇಮಠ, ಸತೀಶ ಮುದಗಲ್, ಬಸವಣ್ಣಯ್ಯ ಹಿರೇಮಠ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

