ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹುನ್ನಾರ
ಕನ್ನಡಪ್ರಭ ವಾರ್ತೆ, ಗದಗ, ಏ. 19
ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿರುವ ಬಿಜೆಪಿಯಲ್ಲಿ ಆಂತರಿಕ ಕಲಹ ಸೃಷ್ಟಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ಅಂತಹ ಷಡ್ಯಂತರಕ್ಕೆ ಪ್ರಜ್ಞಾವಂತ ಜನತೆ ಬಲಿಯಾಗಬಾರದು ಎಂದು ಶಾಸಕ ಹಾಗೂ ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಹೇಳಿದರು.
ಅವರು ಬುಧವಾರ ನಗರದ ವಾರ್ಡ್ ನಂ. 24 ರಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿಯ ಸದಸ್ಯ ಛಗನ್ ರಾಜಪುರೋಹಿತ ನಿವಾಸದಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ರಾಜಸ್ಥಾನಿ ವಿಷ್ಣು ಸಮಾಜ ಹಾಗೂ ಜೈನ ಸಮಾಜದ ಬಿಜೆಪಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು.
ಅಧಿಕಾರ ಕಳೆದುಕೊಂಡ ತಕ್ಷಣ ನೀರಿನಿಂದ ಹೊರಗಡೆ ಬಿದ್ದ ಮೀನಿನಂತೆ ಕಾಂಗ್ರೆಸ್ ನಾಯಕರು ಒದ್ದಾಡುವವರಾಗಿದ್ದಾರೆ. ಅಧಿಕಾರದ ಹಪಾಹಪಿಯಿಂದ ಹತಾಶರಾಗಿ ಸಮಾಜಗಳ ಹೆಸರಲ್ಲಿ ಒಡೆದಾಳುವ ಹಾಗೂ ಕುತಂತ್ರದಿಂದ ಸರ್ಕಾರವನ್ನು ಬೀಳಿಸುವ ಕಾಂಗ್ರೆಸ್ ವರಸೆ ಈ ರಾಜ್ಯದ ಜನತೆಗೆ ಗೊತ್ತಿರದ ವಿಷಯವೇನಲ್ಲ ಎಂದರು. ಜೈನ ಸಮಾಜದ ಹಿರಿಯ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಾಂತಿಲಾಲ ಬನ್ಸಾಲಿ ಮಾತನಾಡಿ, ಬಿಜೆಪಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡಲು ಕಂಕಣಬದ್ಧವಾಗಿದ್ದು, ಈಗಿನ ವಿಧಾನಸಭೆ ಚುನಾವಣೆ ಅಲ್ಲದೇ ಮಾಧ್ಯಮಗಳ ಸಮೀಕ್ಷೆಯಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು. ಮಾಧವ ಗಣಾಚಾರಿ, ಸದಾನಂದ ಪಿಳ್ಳಿ, ವಿನಾಯಕ ಮಾನ್ವಿ, ಪ್ರವೀಣ ಬನ್ಸಾಲಿಯವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಚೇಲರಾಜ ರಾಜಪುರೋಹಿತ, ಬಾಬುಲಾಲಜಿ ರಾಜಪುರೋಹಿತ, ದೀಪಚಂದ ಗೆಹಲೊತ, ಭರತ ರಾಜಪುರೋಹಿತ, ಮೂಲಚಂದ್ ಪರಮಾರ, ಡೊಣ್ಣರಾಮ ಚೌಧರಿ, ಹೇಮಾರಾಮ ಚೌಧರಿ, ಭೀಮಸಿಂಗ್ ರಾಜಪುರೋಹಿತ, ಮದನಸಿಂಗ್ ರಾಜಪುರೋಹಿತ, ರಾಮುದಾನ ಚಾರಣ, ದಿನೇಶ ಬನಸಾಲಿ, ಜಿತೇಂದ್ರ ಜೈನ, ಅಮಿತ್ ಲುಂಕಡ, ಸಂದೀಪ ಶಹಾ, ಜಬ್ಬರಸಿಂಗ್ ರಜಪುತ, ಕಿಶನಸಿಂಗ್ ರಾಜಪುರೋಹಿತ, ಬೋಲಾರಾಮ ಚೌದರಿ, ಅರವಿಂದ ಬಂದಾ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

