ಕೆಜೆಪಿ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವದ್ಧಿ
ಗದಗ: ಅಭಿವೃದ್ಧಿಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಗೆದ್ದರೆ ಗದಗ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಅಭಿವೃದ್ಧಿಗೊಳಿಸಲಾಗುವುದು ಎಂದು ಕೆಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹೇಳಿದರು. ಅವರು ಭಾನುವಾರ ತಾಲೂಕಿನ ಹಂಗನಕಟ್ಟಿ ಗ್ರಾಮದಲ್ಲಿ ಕೆಜೆಪಿ ಪ್ರಚಾರ ಕಾರ್ಯಕ್ರಮ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಅವರನ್ನು ಬೆಂಬಲಿಸಿ ಮತ ನೀಡಿ, ಇದರಿಂದ ಜನಸಾಮಾನ್ಯರ ಎಲ್ಲ ಸಮಸ್ಯೆ ನಿವಾರಣೆಯಾಗುತ್ತವೆ. ಜನರ ನೋವು ನಲಿವುಗಳಿಗೆ ಸ್ಪಂದಿಸುವ ಆದರ್ಶ ನಾಯಕತ್ವದ ಕೊರತೆ ನೀಗುತ್ತದೆ. ಕಾರಣ ಜನತೆ ಕೆಜೆಪಿ ಬೆಂಬಲಿಸುವಂತೆ ಕೋರಿದರು. ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ಪಲ್ಲೇದ, ರಜಾಕ ಡಂಕೇದ ಮಾತನಾಡಿದರು. ಹಂಗನಕಟ್ಟಿ ಗ್ರಾಮದ ಈಶ್ವರಪ್ಪ ಗದ್ದಿ, ಮಲ್ಲಪ್ಪ ಗದ್ದಿ, ಬಸಪ್ಪ ಗದ್ದಿ, ಅಶೋಕ ಗದ್ದಿ, ಚೆನ್ನಪ್ಪ ಖಾನಾಪುರ, ಮಂಜಪ್ಪ ಅಬ್ಬಿಗೇರಿ, ಈರಪ್ಪ ಗದ್ದಿ, ಕುಬೇರಪ್ಪ, ಪಂಚಾಕ್ಷರಪ್ಪ ಗದ್ದಿ, ಶರಣಪ್ಪ ಕಿತ್ತಲಿ, ರಾಮಣ್ಣ ತಳವಾರ, ನಾಗಪ್ಪ ಮುಳಗುಂದ, ವಾಸಪ್ಪ ಡಮನಳ್ಳಿ ಮುಂತಾದವರು ಕೆಜೆಪಿ ಸೇರ್ಪಡೆಯಾದರು. ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಅಮರನಾಥ ಬೆಟಗೇರಿ, ಸರ್ಫರಾಜ ಬಳ್ಳಾರಿ, ಶ್ರಿಕಾಂತ ಆದಪ್ಪನವರ, ಸಯ್ಯದ ಖಾಲಿದ ಕೊಪ್ಪಳ, ಕೆ.ಪಿ. ಗುಳಗೌಡ್ರ, ಉಡಚಪ್ಪ ಹಳ್ಳಿಕೇರಿ, ಸಯ್ಯದ ಖಾಲಿದ ಕೊಪ್ಪಳ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ವಿಕ್ರಾಂತ ಅಬ್ಬಿಗೇರಿ, ಅರುಣ ಬಾವಿ ಮುಂತಾದವರು ಪಾಲ್ಗೊಂಡಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

