ಗದಗ

ಕಾಂಗ್ರೆಸ್, ಬಿಜೆಪಿಗೆ ರೈತರ ಕಾಳಜಿ ಇಲ್ಲ

Published On :

ಗಜೇಂದ್ರಗಡ/ಗದಗ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರ ಬದುಕು ಉನ್ನತೀಕರಿಸುವಲ್ಲಿ ಇವರು ವಿಫಲರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಪರ ಮತ ಯಾಚನೆ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮತದಾರ ಪ್ರಭುಗಳು ಈ ಬಾರಿ ಜೆಡಿಎಸ್ಗೆ ಅಧಿಕಾರ ನೀಡಿದ 24 ಗಂಟೆಯೊಳಗೆ ಕೃಷಿಕ, ನೇಕಾರ, ಗುಡಿ ಕೈಗಾರಿಕೆ ಸೇರಿದಂತೆ ಎಲ್ಲ ವಿಧದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದರು.
ದೀರ್ಘ ಅವಧಿಗೆ ದೇಶ ಮತ್ತು ರಾಜ್ಯವನ್ನಾಳಿದ ಕಾಂಗ್ರೆಸ್ಗೆ ಜನತೆಯ ಹಿತಕ್ಕಿಂತ ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ. ಇನ್ನು ರಾಜ್ಯದ ಬಿಜೆಪಿ ಸರ್ಕಾರ ಜನರ ಹಿತ ಮರೆತು ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಜತೆಗೆ ಸ್ವಾರ್ಥದ ಮೂಲಕ ಖಜಾನೆ ತುಂಬಿಸಿಕೊಳ್ಳುವಲ್ಲಿ ಪೈಪೋಟಿ ನಡೆಸಿ ಪಕ್ಷ ಒಡೆದು ಹೋಳಾಗಿರುವುದು ಜನತೆಯ ಕಣ್ಮುಂದಿದೆ. ಹೀಗಾಗಿ, ಎಲ್ಲರೂ ಜೆಡಿಎಸ್ನತ್ತ ಒಲವು ವ್ಯಕ್ತ ಪಡಿಸುತ್ತಿದ್ದಾರೆ ಎಂದರು.
ಯೋಜನೆ ಪೂರ್ಣಗೊಳಿಸುತ್ತೇವೆ: ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕೃಷ್ಣಾ, ಕಾವೇರಿ ಮುಂತಾದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. 65 ಸಾವಿರ ಕೋಟಿ ವೆಚ್ಚದಲ್ಲಿ ಕುಡಿವ ನೀರಿನ ಶಾಶ್ವತ ಯೋಜನೆ, ನಗರ ಮತ್ತು ಗ್ರಾಮೀಣ ಪ್ರದೇಶ ವಸತಿ ಹೀನರಿಗೆ ಶಾಶ್ವತ ಸೂರು ಕಲ್ಪಿಸಲು 75 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಗುಡಿಸಲು ಮುಕ್ತ ರಾಜ್ಯಕ್ಕೆ ಸಂಕಲ್ಪ ತೊಡಲಾಗಿದೆ ಎಂದು ಹೇಳಿದರು.
ಗರ್ಭಿಣಿಯರಿಗೆ ಹೆರಿಗೆ ನಂತರ ತಾಯಿ ಮಗುವಿನ ಆರೈಕೆಗಾಗಿ ಪ್ರತಿ ತಿಂಗಳು ರು. 5 ಸಾವಿರ ನೀಡಲಾಗುವುದು. ವೃದ್ಧಾಪ್ಯ, ವಿಧವಾ ವೇತನವನ್ನು ರು. 1500ಕ್ಕೆ ಹೆಚ್ಚಿಸಲಾಗುವುದು. ಅಂಗವಿಕಲರಿಗೆ 2500 ಹಾಗೂ 70 ವಯಸ್ಸು ಮೇಲ್ಪಟ್ಟವರಿಗೆ ಜೀವಿತಾವಧಿಗೆ ಮಾಸಿಕ ರು. 5 ಸಾವಿರ ಗೌರವಧನ ನೀಡಲಾಗುವುದು ಎಂದರು.
ನೆಮ್ಮದಿಯ ಬದುಕಿಗೆ: ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಗಳನ್ನು ಉತ್ತರ ಕರ್ನಾಟಕದಲ್ಲೂ ಸ್ಥಾಪಿಸಲಾಗುವುದು. ಕ್ಯಾನ್ಸರ್, ಹೃದಯ ಸಂಬಂದಿ ಹಾಗೂ ಕಿಡ್ನಿ ವೈಫಲ್ಯದಂತಹ ಮಾರಕ ಕಾಯಿಲೆಯಿಂದ ನರಳುತ್ತಿರುವ ಬಡ ರೋಗಿಗಳಿಗೆ ಸರ್ಕಾರದಿಂದ ತಿಂಗಳಿಗೆ 6 ಸಾವಿರ ನೀಡಿ, ರಾಜ್ಯದ ಜನತೆ ನೆಮ್ಮದಿಯ ಬದುಕು ಸಾಗಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಜೆಡಿಎಸ್ ಸಂಕಲ್ಪ ತೊಟ್ಟಿದೆ ಮೇ 5ರಂದು ನಡೆವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹಾಗೂ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಮಾತನಾಡಿದರು. ನರಗುಂದ ಮತಕ್ಷೇತ್ರ ಅಭ್ಯರ್ಥಿ ಪ್ರಕಾಶ ಕರಿ, ಡಾ೤ ಮಂಜುನಾಥ ವಿಶ್ವಬ್ರಾಹ್ಮಣ, ರಾಮಣ್ಣ ಸಕ್ರೋಜಿ, ಮೈಲಾರಪ್ಪ ದೇಶಣ್ಣನವರ, ಕೆ.ಎಸ್. ಕೊಡತಗೇರಿ, ಮಕ್ತುಂಸಾಬ ಸಾಗರ, ಉಮೇಶ ಹಿರೇಗೌಡ್ರ, ರವಿಕುಮಾರ ಹಾವಿನಾಳ, ಉಮೇಶ ಮಲ್ಲಾಪುರ, ಮಹಾದೇವಪ್ಪ ನವಲಗುಂದ, ಕೊಟ್ರೇಶ ಮುತ್ತೂರ ಉಪಸ್ಥಿತರಿದ್ದರು.



ದೀರ್ಘ ಅವಧಿಗೆ ದೇಶ ಮತ್ತು ರಾಜ್ಯವನ್ನಾಳಿದ ಕಾಂಗ್ರೆಸ್ಗೆ ಜನತೆಯ ಹಿತಕ್ಕಿಂತ ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ. ಇನ್ನು ರಾಜ್ಯದ ಬಿಜೆಪಿ ಸರ್ಕಾರ ಜನರ ಹಿತ ಮರೆತು ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಜತೆಗೆ ಸ್ವಾರ್ಥದ ಮೂಲಕ ಖಜಾನೆ ತುಂಬಿಸಿಕೊಳ್ಳುವಲ್ಲಿ ಪೈಪೋಟಿ ನಡೆಸಿ ಪಕ್ಷ ಒಡೆದು ಹೋಳಾಗಿರುವುದು ಜನತೆಯ ಕಣ್ಮುಂದಿದೆ.


ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕೃಷ್ಣಾ, ಕಾವೇರಿ ಮುಂತಾದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. 65 ಸಾವಿರ ಕೋಟಿ ವೆಚ್ಚದಲ್ಲಿ ಕುಡಿವ ನೀರಿನ ಶಾಶ್ವತ ಯೋಜನೆ, ವಸತಿ ಹೀನರಿಗೆ ಶಾಶ್ವತ ಸೂರು ಕಲ್ಪಿಸಲು 75 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸಲಾಗುವುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.