ಗದಗ

ಬಿಜೆಪಿ ಅಭ್ಯರ್ಥಿ ಮುನೇನಕೊಪ್ಪ ಪ್ರಚಾರ

Published On :

ನವಲಗುಂದ: ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಕ್ಷೇತ್ರಕ್ಕೆ ತರಲು ಶ್ರಮವಹಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿ ಮಾಡಲು ಆಶೀರ್ವದಿಸಬೇಕೆಂದು ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು.  ಅವರು ವಿಧಾನಸಭಾ ಕ್ಷೇತ್ರದ ಬಸಾಪೂರ, ಮಜ್ಜಿಗುಡ್ಡ, ಸೈದಾಪೂರ, ಸಾಸ್ವಿಹಳ್ಳಿ, ಶಿಶ್ವಿನಹಳ್ಳಿ, ನಲವಡಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ನಂತರ ನಲವಡಿ ಗ್ರಾಮದಲ್ಲಿ ಸೇರಿದ ಮತದಾರರನ್ನುದ್ದೇಶಿಸಿ ಮಾತನಾಡಿದರು.  ಗಿರೀಶ ಗಿರಡ್ಡಿ, ಮೌಲಾಸಾಬ ದಾವಲಖಾನವರ, ಗುರಪ್ಪಗೌಡ ದೊಡ್ಡಗೌಡ್ರ, ಅಶೋಕ ಹರ್ತಿ, ಗಿರೀಶ ಮಂಟೂರ ಹಲವಾರು ಕಾರ್ಯಕರ್ತರು ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಧುರೀಣರಾದ ಮಂಜುನಾಥಗೌಡ ಪಾಟೀಲ, ಜಿಪಂ ಸದಸ್ಯ ಸುರೇಶ ಗಾಣಿಗೇರ, ಮಾಬಳೇಶ್ವರ ಅಣ್ಣಿಗೇರಿ, ವೀರಪ್ಪ ನಾಯ್ಕರ, ಹನಮಂತಗೌಡ ಪಾಟೀಲ, ಸುರೇಶ ಮನಮಿ, ಮಂಜುನಾಥಗೌಡ್ರ, ಅಜ್ಜಪ್ಪ ಹೊರಕೇರಿ, ಗಿರೀಜಾ ಮುಳುಗುಂದಮಠ, ವಿ.ಎಸ್. ಚಿವಟೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.