ಅಭಿವೃದ್ಧಿ ಪರಿಗಣಿಸಿ ಮತ ನೀಡಿ: ಬಿದರೂರ
ಕನ್ನಡಪ್ರಭ ವಾರ್ತೆ, ಗದಗ, ಏ. 28
ಗದಗ ನಗರದಲ್ಲಿ ಹಾಗೂ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಹಿಂದೆ 40 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಳೆದ 5 ವರ್ಷದ ಅವಧಿಯಲ್ಲಿ ಮಾಡಲಾಗಿದ್ದು, ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ ಎಂದು ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಹೇಳಿದರು.
ಈಚೆಗೆ ಅವರು ನಗರದ ವಾರ್ಡ್ ನಂ. 32ರಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಿಂದೆ ಕಾಂಗ್ರೆಸ್ಸಿಗರು ಕೇವಲ ಭರವಸೆಗಳನ್ನು ನೀಡುತ್ತಾ ಜನರ ಭಾವನೆಗಳಿಗೆ ಸ್ಪಂದಿಸದೆ ಇರುವುದರಿಂದ ಗದುಗಿನ ಜನ ಯಾರು ಅಭಿವೃದ್ಧಿ ಕಾರ್ಯ ಮಾಡಿರುವರೋ ಅಂತಹ ಅಭ್ಯರ್ಥಿಗೆ ಮತ ನೀಡಲು ಮನಸ್ಸು ಮಾಡಿದ್ದಾರೆ. 5 ವರ್ಷದ ಅವಧಿಯಲ್ಲಿ ಗದಗ ನಗರದಲ್ಲಿ ಹಿಂದೆಂದೂ ನಡೆಯದಂತಹ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಅದರ ಆಧಾರದಲ್ಲಿ ಮತ ನೀಡುವಂತೆ ವಿನಂತಿಸುತ್ತೇನೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಭಾಂಡಗೆ ಮಾತನಾಡಿದರು. ಪರಶುರಾಮ ಹೆಬಸೂರ, ಜಗನ್ನಾಥ ಭಾಂಡಗೆ, ವಿಠ್ಠಲ್ಸಾ ಭಾಂಡಗೆ, ಲಕ್ಷ್ಮಣಸಾ ಹಾವನೂರ, ವಿನೂತ ಜಗತಾಪ, ಕಾಶೀನಾಥಸಾ ಕಬಾಡೆ, ವೆಂಕಟೇಶ ಕಾಟೀಗಾರ, ಮೋತಿಲಾಲಸಾ ರಾಯಬಾಗೆ, ಮಲ್ಲು ಬಮ್ಮಸಾಗರ, ಅನಿಲ ಜಾದವ, ಬಸವರಾಜ ಅಕ್ಕಿ, ವಿಜ್ಜು ಗಾಮನಗಟ್ಟಿ, ವಾಸೀಮಖಾಜಿ, ಯಲ್ಲಪ್ಪ ರಾಯಬಾಗಿ, ವೆಂಕಟೇಶ ಭಾಂಡಗೆ, ವಸಂತ ಖೋಡೆ, ಗೋಪಾಲ ಖೋಡೆ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

