ರೈತರ ಶಾಪದಿಂದ ಬಿಜೆಪಿ ಹೋಳು: ಅರ್ಷದ್
ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 29
ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ರೈತರು ಹಾಕಿದ ಶಾಪದ ಫಲವೇ ಇಂದು ಬಿಜೆಪಿ 3 ಹೋಳಾಗಿ ಬೀದಿಗೆ ಬರುವಂತಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಹೇಳಿದರು.
ಅವರು ಸೋಮವಾರ ಸ್ಥಳೀಯ ಸಂಕನಗೌಡ್ರ ಬಯಲು ಜಾಗೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮಾತನಾಡಿದರು. ಬಿಜೆಪಿ 2008ರ ವಿಧಾನಸಭಾ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದಲ್ಲಿ ಈ ರಾಜ್ಯದ ಜನತೆಗೆ 24 ಗಂಟೆ ಉಚಿತ ವಿದ್ಯುತ್ ಪೂರೈಕೆ, ರೈತರಿಗೆ ರು. 2ಕ್ಕೆ ಕೆಜಿ ಅಕ್ಕಿ, ಪಡಿತರ ಚೀಟಿ, ಸಮಯಕ್ಕನುಸಾರವಾಗಿ ಪೆನ್ಶನ್, ನಿರುದ್ಯೋಗಿ ಯುವಕರಿಗೆ ರು. 1500 ಭತ್ಯೆ ಹೀಗೆ ಭರವಸೆ ನೀಡಿ ಅಧಿಕಾರ ಪಡೆದರು. ಅಧಿಕಾರಕ್ಕೆ ಬಂದು ಮೂವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದರು. ಭ್ರಷ್ಟಾಚಾರ, ಪಕ್ಷದಲ್ಲಿ ಒಳಜಗಳ, ಹಲವಾರು ಹಗರಣಗಳ ಮೂಲಕ ದುರಾಡಳಿತ ನಡೆಸಿದರು ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ರೈತರ ಪಕ್ಷ. ಸ್ವತಂತ್ರ ದೊರೆತಾಗಿನಿಂದಲೂ ಅಸ್ತಿತ್ವದಲ್ಲಿರುವ ಪಕ್ಷವಾಗಿದೆ. ಆದ್ದರಿಂದ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು. ಸರಳ ಸಜ್ಜನಿಕೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಆಯ್ಕೆಗೊಳಿಸಿದಲ್ಲಿ ಪ್ರತಿಯೊಬ್ಬರ ಆಶೋತ್ತರಗಳಿಗೆ ಸ್ಪಂದಿಸುತ್ತಾರೆಂಬ ಭರವಸೆ ನೀಡಿದರು.
ವಿವಿಧ ಪಕ್ಷಗಳ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ, ಮಿಥುನ ಪಾಟೀಲ ಮಾತನಾಡಿದರು.
ಆರ್.ಬಿ.ಬಸವರಡ್ಡೇರ, ಎ.ಎ. ನವಲಗುಂದ, ಶಮಸುದ್ದೀನ ಕುದರಿ, ಸೋಮು ಲಕ್ಕನಗೌಡ್ರ, ಬಸನಗೌಡ ಪೊಲೀಸ್ ಪಾಟೀಲ, ಅಂದಾನಗೌಡ ಪಾಟೀಲ, ಕಲ್ಮೇಶ ತೊಂಡಿಹಾಳ, ಪ್ರಭು ಮೇಟಿ, ಉಮೇಶಗೌಡ ಸಂಕನಗೌಡ್ರ, ಶರಣಪ್ಪ ಗುಡ್ಲಾನೂರ, ಯೂಸೂಫ ಇಟಗಿ, ಭವಾನಿ ಬೆಟಗೇರಿ, ಪ್ರಶಾಂತ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

