ಬಸವ ಜಯಂತಿಗೆ ಶತಮಾನದ ಸಂಭ್ರಮ: ಕುಮಾರದೇವರು
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 2
ಧಾರವಾಡ ಮುರುಘಾಮಠದ ಮೃತ್ಯುಂಜಯ ಶರಣರು ಹಾಗೂ ಹರ್ಡೇಕರ ಮಂಜಪ್ಪನವರು ಅಕ್ಷಯ ತೃತೀಯ ದಿನ 1913 ರಿಂದ ಬಸವ ಜಯಂತಿಯನ್ನು ಆಚರಿಸಲು ಪ್ರಾರಂಭಿಸಿ, ಇದೀಗ ಬಸವ ಜಯಂತಿ ಶತಮಾನದ ಸಂಭ್ರಮದಲ್ಲಿದೆ ಎಂದು ಬೆಳಗಾವಿ ರುದ್ರಾಕ್ಷಿ ಮಠದ ಕುಮಾರ ದೇವರು ಹೇಳಿದರು.
ಅವರು ಗುರುವಾರ ರಾತ್ರಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢಮಾಸದ ಅಂಗವಾಗಿ ಒಂದು ತಿಂಗಳ ಕಾಲ ಜರುಗುತ್ತಿರುವ ವಚನ ಸಂಸ್ಕೃತಿ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಬಸವಣ್ಣ ಎಂದರೆ ಕೇವಲ ರೈತನಿಗೆ ಆಸರೆಯಾಗಿ ಉತ್ತಿ, ಬಿತ್ತುವ ಎತ್ತು ಎಂದು ತಿಳಿದಿದ್ದ ಜನತೆಗೆ ಬಸವಣ್ಣ ಎಂದರೆ ಊಳುವ ಎತ್ತಲ್ಲ. ಬಸವಣ್ಣನೆಂದರೆ ಎಲ್ಲ ಜನಾಂಗದವರಿಗೆ ಆಸರೆಯಾದವರು. ಇಷ್ಟಲಿಂಗವನ್ನು ಕಟ್ಟುವ ಮೂಲಕ ಎಲ್ಲರನ್ನೂ ಲಿಂಗಾಯತ ಧರ್ಮದಲ್ಲಿ ತಂದವರು ಎಂದು ಗುರುತಿಸುವಂತೆ ಮಾಡಿದವರೇ ಮೃತ್ಯುಂಜಯ ಶ್ರೀಗಳು ಹಾಗೂ ಹರ್ಡೇಕರ ಮಂಜಪ್ಪನವರು. ತಂದೆ, ತಾಯಿಯನ್ನು ಗೌರವದಿಂದ ಕಾಣುವ ಮೂಲಕ ಅವರ ಬೇಕು, ಬೇಡಿಕೆಗಳನ್ನು ಈಡೇರಿಸಿದರೆ ಅವರಲ್ಲಿ, ನಾವು ನಿತ್ಯ ಶ್ರದ್ಧೆಯಿಂದ ಮಾಡುವ ಕಾಯಕದಲ್ಲಿ, ದಾಸೋಹದಲ್ಲಿ ನಾವು ಬಸವಣ್ಣನನ್ನು ಕಾಣಬಹುದು ಎಂದರು.
ಜನ್ಮಕೊಟ್ಟ ತಂದೆ-ತಾಯಿಯನ್ನು ಮುಪ್ಪಾವಸ್ಥೆಯಲ್ಲಿ ಕರುಣೆಯಿಂದ ಸಾಕುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಬೇಕು. ಜನ್ಮಕೊಟ್ಟ ತಾಯಿಯಷ್ಟೇ ತನಗೆ ಜೀವ ಕೊಟ್ಟವರನ್ನು ಬಿಟ್ಟು ಬಂದಿರುವ ಹೆಂಡತಿಯೂ ಅಷ್ಟೇ ಶ್ರೇಷ್ಠ. ಆದ್ದರಿಂದ ಜೀವನ ಸಮಾಗಮದಿಂದ ನಡೆಯಬೇಕಾದರೆ ತಂದೆ, ತಾಯಿ, ಹೆಂಡತಿ ಮಕ್ಕಳು ಎಲ್ಲರೂ ಅನ್ಯೋನ್ಯದಿಂದ ಇರಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

