ಕ್ಷೌರಿಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಗದಗ, ಆ. 3
ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರವು ಪ್ರತ್ಯೇಕ ಕ್ಷೌರಿಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಕರ್ನಾಟಕ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿ. ಚಂದ್ರು ಹೇಳಿದರು.
ಈಚೆಗೆ ಅವರು ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ಸಮುದಾಯ ಭವನದಲ್ಲಿ ಕರ್ನಾಟಕ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಕ್ಷೌರಿಕ ಸಮಾಜ ಆರ್ಥಿಕವಾಗಿ ಸುಧಾರಣೆಯಾಗದ್ದರಿಂದ 2ಎ ಮೀಸಲಾತಿಯಿಂದ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಸಮಾಜಕ್ಕೆ ಪ್ರತ್ಯೇಕ ಮೀಸಲಾತಿಗಾಗಿ ಸಂಘಟಿತರಾಗಿ ಹೋರಾಟಕ್ಕೆ ಇಳಿಯಲು ಸನ್ನದ್ಧರಾಗಬೇಕು. ಸಮಾಜ ಬಾಂಧವರು ಒಳಪಂಗಡಗಳ ಭೇದ ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜ ಬಾಂಧವರಿಗೆ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ವೃತ್ತಿ ತರಬೇತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸಮಾಜದ ಬಗೆಗೆ ಅಪಹಾಸ್ಯ ಮಾಡುವವರು. ಸಮಾಜದ ಬಗೆಗೆ ಅಪಹಾಸ್ಯ ಮಾಡಿದವರಿಗೆ ಈಗಾಗಲೇ ವೇದಿಕೆಯ ವತಿಯಿಂದ ಬಹಿರಂಗ ಕ್ಷಮೆ ಕೋರುವಂತೆ ಮಾಡಲಾಗಿದೆ. ಸಮಾಜದ ಯುವಕರು ಸ್ವಾವಲಂಬಿಯಾಗಿ ಬದುಕುವುದನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಘಟನೆಗೆ ಮಹತ್ವ ನೀಡಬೇಕು ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಭೋಜರಾಜ ಹಾಗೂ ರಾಜ್ಯ ಗೌರವಾಧ್ಯಕ್ಷ ಎಸ್.ಎಂ. ರಾಜ್ ಮಾತನಾಡಿ, ಕ್ಷೌರಿಕ ವೃತ್ತಿ ಒಂದು ಕಲೆಯಾಗಿದ್ದು, ಕಲೆಗೆ ಬೆಲೆ ಕೊಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕ್ಷೌರಿಕರು ಸಮಯ ಪಾಲನೆ ಮೂಲಕ ಅಮೂಲ್ಯ ಸಂಪತ್ತು ಬೆಳೆಸಬಹುದು. ನಮ್ಮಲ್ಲಿರುವ ಆಂತರಿಕ ಬಿಕ್ಕಟ್ಟನ್ನು ನಾವು ಶಮನಗೊಳಿಸಿಕೊಳ್ಳದಿದ್ದರೆ ವೃತ್ತಿ ಧರ್ಮಕ್ಕೆ ಅಪಾಯ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಆಶೀರ್ವಚನ ನೀಡಿದರು.
ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೃಷ್ಣಾ ಹಡಪದ ಮಾತನಾಡಿದರು. ಈ ಸಂದರ್ಭದಲ್ಲಿ ಹನುಮಂತ ರಾಂಪುರ, ನಿಂಗಣ್ಣ ರಾಂಪುರ, ವಿಷ್ಣು ಮಾನೆ, ವೇದಿಕೆಯ ಉಪಾಧ್ಯಕ್ಷ ಪಾಂಡು ಕಾಳೆ, ಗೌರವಾಧ್ಯಕ್ಷ ಪರಶುರಾಮ ಕೋಟೆಕಲ್ಲ, ಮಲ್ಲಪ್ಪ ಗುರಜಾಲಕರ, ಗಣೇಶ ಬಳ್ಳಾರಿ, ರಮೇಶ ಲಂಕಲ್, ರವಿ, ರಾಮಣ್ಣ ಗುರುಜಾಲಕರ, ವೆಂಕಟೇಶ ಬಾಯಲಗುಡ್ಡ, ಶಂಕರ ಮಾನೆ, ಜಂಬಣ್ಣ ಕಡಮೂರ, ಸುರೇಶ ಬೂದೂರ, ರಾಘವೇಂದ್ರ ಬಾಯಲಗುಡ್ಡ, ಬಲರಾಜ ಕೋಟೆಕಲ್ಲ, ಅಶೋಕ ವಲ್ಲೂರ, ಪರಶುರಾಮ ರಾಂಪುರ, ಯಲ್ಲಪ್ಪ ಕಬ್ಬರ್ಗಿ, ಮುರಳಿ ವಲ್ಲೂರ ಉಪಸ್ಥಿತರಿದ್ದರು. ನಾಗರಾಜ ಆರೇಪಲ್ಲಿ ಸ್ವಾಗತಿಸಿದರು. ರವೀಂದ್ರಕುಮಾರ ಹಡಪದ ನಿರೂಪಿಸಿದರು. ಗೋವಿಂದರಾಜ ಕರ್ನೂಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

