ಧರ್ಮದ ಹೆಸರಿನಲ್ಲಿ ಪ್ರಾಣಿ ಹತ್ಯೆ ಸಲ್ಲದು
ಕನ್ನಡಪ್ರಭ ವಾರ್ತೆ, ರೋಣ, ಆ. 3
ಮುಗ್ಧ ಸಾಕು ಪ್ರಾಣಿಗಳನ್ನು ಧರ್ಮ ಮತ್ತು ದೇವರ ಹೆಸರಿನಲ್ಲಿ ಹತ್ತೆ ಮಾಡುವುದು ಸನಾತನ ಧರ್ಮದ ನಾಗರಿಕ ಸಮಾಜದಲ್ಲಿ ತಲೆ ತಗ್ಗಿಸುವ ಸಂಗತಿಯಾಗಿದ್ದು, ಆದ್ದರಿಂದ ಪ್ರಾಣಿ ಹತ್ಯೆ ಸಲ್ಲದು ಎಂದು ಸೂಡಿ ಗುರು ಮಹಾಂತೇಶ್ವರ ಪ್ರೌಢಶಾಲೆಯ ಶಿಕ್ಷಕ ಬಿ.ಎಸ್. ಬಸನಗೌಡ್ರ ಹೇಳಿದರು.
ಅವರು ಈಚೆಗೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಿದ ಬಸಮ್ಮ ಸಂಗನಗೌಡ್ರ ಪಾಟೀಲ ಇವರ 9ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಧಾರ್ಮಿಕ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಆಧುನಿಕತೆಯ ಸ್ಪರ್ಶದಿಂದ ಮಾನವ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಮರೆಯುತ್ತಿದ್ದಾನೆ. ಇದರಿಂದ ಮಾನವೀಯ ಮೌಲ್ಯ ಕುಸಿಯತೊಡಗಿದೆ. ದುರಾಲೋಚನೆಯಿಂದಾಗಿ ಪಾಪ ಕೃತ್ಯಗಳು ತಾಂಡವವಾಡುತ್ತಿವೆ. ಆದ್ದರಿಂದ ದಾರಿ ತಪ್ಪುತ್ತಿರುವ ಸಮಾಜವನ್ನು ಸುಸ್ಥಿತಿಗೆ ತರುವಲ್ಲಿ ಹಿಂದಿನ ದಾರ್ಶನಿಕರಾದ ಅಣ್ಣ ಬಸವಣ್ಣ, ಬುದ್ಧ, ಶಂಕರಾಚಾರ್ಯ, ವಿವೇಕಾನಂದ, ಗಾಂಧೀಜಿಯವರ ಆದರ್ಶ ತತ್ವಗಳನ್ನು ನಾವಿಂದು ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಜಾನಪದ ವಿದ್ವಾಂಸ ಸಿದ್ಧಣ್ಣ ಜಕಬಾಲ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಮೋಹಕ್ಕೊಳಗಾಗಿ ಮೂಲ ಜಾನಪದವನ್ನು ಹಾಳು ಮಾಡುತ್ತಿದ್ದೇವೆ. ಲಾವಣಿ, ಗೀಗೀ ಪದ, ಸೋಬಾನ ಪದ, ಬೈಲಾಟ, ದೊಡ್ಡಟ, ಡೊಳ್ಳು ಕುಣಿತ, ತ್ರಿಪದಿಗಳು ಹೀಗೆ ಜಾನಪದ ಪಟ್ಟಿ ಬೆಳೆಯುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಇವುಗಳನ್ನು ಆಲಿಸದೇ ಇರುವುದರಿಂದ ಇಂದು ಅವು ಅವನತಿಯ ಅಂಚಿಗೆ ತಲುಪಿವೆ. ಆದ್ದರಿಂದ ಯುವ ಜನತೆ ಮೂಲ ಜಾನಪದ, ಕಲೆ, ಸಂಸ್ಕೃತಿಯತ್ತ ಗಮನ ಹರಿಸಬೇಕು ಎಂದರು.
ಸಾನ್ನಿಧ್ಯವನ್ನು ಬಳಗಾನೂರ ಶಾಂತವೀರ ಶ್ರೀಗಳು, ಗುಲಗಂಜಿ ಮಠದ ಗುರುಪಾದ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಿ.ಕೆ. ಸುಂಕದ ವಹಿಸಿದ್ದರು. ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ವೀರಣ್ಣ ಸೊನ್ನದ, ಎಂ.ಎಚ್. ಕೋಲ್ಕಾರ, ಬಾಷಾಸಾಬ್ ಇಟಗಿ, ಕೆ.ಬಿ. ಹರ್ಲಾಪುರ, ಪ್ರಶಾಂತ ರಾಠೋಡ, ರುದ್ರಗೌಡ ಗಿರಡ್ಡಿ, ವೀರಣ್ಣ ಹರದಾರಿ, ಯೂಸೂಫ ಇಟಗಿ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ ಮುಂತಾದವರು ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಠ ನಿರೂಪಿಸಿದರು. ವೀರಭದ್ರಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

