ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ
ಗದಗ: ಗದಗ-ಬೆಟಗೇರಿ ನಗರದ ಎಲ್ಲ ವಾರ್ಡ್ಗಳು ಮೂಲ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಮೂಲ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಂಘದ ಸದಸ್ಯರು ಸಜ್ಜಾಗುವಂತೆ ಜಿಲ್ಲಾಧ್ಯಕ್ಷ ಎಸ್.ಸಿ. ಗಾಣಿಗೇರ ಕರೆ ನೀಡಿದರು.
ಈಚೆಗೆ ಗದಗ ಹುಡ್ಕೋ ಕಾಲೋನಿಯಲ್ಲಿರುವ ಸಚ್ಚಿದಾನಂದ ಮಠದ ಸಭಾಂಗಣದಲ್ಲಿ ನಡೆದ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವಳಿ ನಗರದಲ್ಲಿರುವ ರಸ್ತೆಗಳಲ್ಲಿ ಗುಂಡಿ, ಗಟಾರುಗಳು, ಹುಡ್ಕೋ ಒಳಚರಂಡಿ, ವಾಲ್ ದುರಸ್ತಿ ಬಳ್ಳಾರಿಗೇಟ್ ಬ್ರಿಡ್ಜ್, ರಿಂಗ್ ರೋಡ, ಕುಡಿವ ನೀರಿನ ಕುರಿತು ಇನ್ನಿತರೆ ಸಮಸ್ಯೆಗಳ ಈಡೇರಿಕೆಗೆ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಸಂಘದ ಪದಾಧಿಕಾರಿ ಕೆ.ಆರ್. ಪವಾರ ಹಾಗೂ ಆರ್.ಎ. ಹಿರೇಮಠ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕರ ಸಿಬ್ಬಂದಿ ಮಂಜುನಾಥ ಮಾತನಾಡಿ, ಬ್ಯಾಂಕ್ನಲ್ಲಿ ನಿವೃತ್ತರಿಗಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಆ. 15ರ ಸ್ವಾತಂತ್ರ್ಯ ದಿನೋತ್ಸವದಂದು ಮೊದಲ ಧ್ವಜಾರೋಹಣ ಸಂಘದ ನಾಮಫಲಕ, 6ನೇ ವಾರ್ಷಿಕೋತ್ಸವ ಕಟ್ಟಡ ಉದ್ಘಾಟನಾ ಕಾರ್ಯಕ್ರಮದೊಂದಿಗೆ ನಿವೃತ್ತ ಹಿರಿಯ ನಾಗರಿಕರಿಗೆ ಕಣ್ಣಿನ ಹಾಗೂ ಹೃದಯರೋಗ ಉಚಿತ ತಪಾಸಣೆ ಕುರಿತು ಚರ್ಚಿಸಲಾಯಿತಲ್ಲದೇ ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು, ಹಿರಿಯ ಅಧಿಕಾರಿಗಳನ್ನು ಆಹ್ವಾನಿಸುವ ಹಾಗೂ ನಗರಸಭೆ 35 ಸದಸ್ಯರನ್ನು ಸನ್ಮಾನಿಸುವ ಬಗ್ಗೆ ತೀರ್ಮಾನಿಸಲಾಯಿತು.
ಹೆಚ್ಚುವರಿ ಕಾರ್ಯದರ್ಶಿ ರಾಜಶೇಖರ ಕರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಬಿ. ಹೂಗಾರ, ಬಿ.ಎಸ್. ನಾಯ್ಕರ, ಐ.ಕೆ. ಬಲುಚಿಗಿ, ಎಸ್.ಐ. ಹೊನ್ನಗುಡಿ, ಡಿ.ಬಿ. ಭಾವಿಕಟ್ಟಿ, ರಾಜಶೇಖರ ಹಿರೇಮಠ, ಎಸ್.ವಿ. ಬೊಮ್ಮಸಾಗರ, ಜಿ.ಎಂ. ಯಾನಮಶೆಟ್ಟಿ, ಡಾ. ವಿ.ಬಿ. ಮೇಲ್ಮರಿ, ವಿ.ಸಿ. ಹಂಚಿನಾಳ, ಜೆ.ಎ. ಬಾಗವಾನ ಮುಂತಾದವರು ಇದ್ದರು.
ಬಿ.ಬಿ. ಹೂಗಾರ ಸ್ವಾಗತಿಸಿದರು. ರಾಜಶೇಖರ ಕರಡಿಯವರು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

