ಕಾಯಕದಲ್ಲಿ ಶ್ರದ್ಧೆ ಇರಲಿ: ಬೂದೀಶ್ವರ ಶ್ರೀ
ಗದಗ: ದುಡಿಯದೆ ತಿನ್ನುವವನು ಶ್ರೀಮಂತನಿದ್ದರೂ ಬಡವನೇ, ದುಡಿದು ತಿನ್ನುವವ ಬಡವನಿದ್ದರೂ ಶ್ರೀಮಂತನಾಗಿರುತ್ತಾನೆ. ಕಾಯಕದಲ್ಲಿ ಶ್ರದ್ಧೆ ಇರಬೇಕು. ಭಕ್ತಿ- ಪ್ರೇಮ ಹೊಂದಾಣಿಕೆ ಇರಬೇಕು. ಒಳ್ಳೆಯತನವನ್ನು ರೂಢಿಸಿಕೊಂಡು ಬದುಕಿದರೆ ಬದುಕು ಬಂಗಾರವಾಗುತ್ತದೆ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಗ್ರಾಮೀಣ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಹಾಗೂ ಹಡಪದ ಅಪ್ಪಣ್ಣ ಸಮುದಾಯ ಭವನದ ಭೂಮಿ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿಂತೆಗಿಂತ ಚಿಂತನೆ ಇರಲಿ. ತಾವೆಲ್ಲ ಬಸವಣ್ಣನವರ ಆಪ್ತಕಾರ್ಯದರ್ಶಿ ಅಪ್ಪಣ್ಣನವರ ಹಾಗೆಯೇ ಸಮಾಜದ ಕಾರ್ಯಸೂಚಿಯಾಗಿರಬೇಕು ಎಂದರು. ತಂಗಡಗಿಯ ಅನ್ನದಾನ ಅಪ್ಪಣ್ಣ ಭಾರತಿ ಶ್ರೀಗಳು ಮಾತನಾಡಿ, ಹಡಪದ ಸಮಾಜವನ್ನು ಪ್ರವರ್ಗ 1ರಲ್ಲಿ ಸೇರಿಸಬೇಕು. ಹುಲಕೋಟಿ ಗ್ರಾಮದಲ್ಲಿರುವ ಶಿವಶರಣ ಹಡಪದ ಅಪ್ಪಣನವರ ತಾಲೂಕು ಸಮುದಾಯ ಭವನದ ನಿರ್ಮಾಣ ಮಾಡಿಸಿಕೊಡುವುದು. ಹಾಗೇನೆ ಅಂತೂರ ಬೆಂತೂರ, ಮುಳಗುಂದ, ನಾಗಸಮುದ್ರ ಹಾಗೂ ಹರ್ಲಾಪುರ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡುವುದು. ಗ್ರಾಮೀಣ ಪ್ರದೇಶದ ಕ್ಷೌರಿಕ ವೃತ್ತಿಪರರಿಗೆ ಸರ್ಕಾರದ ಸ್ವಾಮ್ಯದಲ್ಲಿಯ ನಿವೇಶನ ಕೊಡುವುದು. ಹಡಪದ ಸಮಾಜದವರಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ಹಲವು ಸೌಲಭ್ಯಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೋಹನ ಚಂದಪ್ಪನವರ, ಗ್ರಾಪಂ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ, ತಾಪಂ ಸದಸ್ಯೆ ವಿಜಯಲಕ್ಷ್ಮೀ ತಮ್ಮನಗೌಡರ, ತಾಪಂ ಸದಸ್ಯ ಮಹಾದೇವಪ್ಪ ರೊಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಪಿಡಿಒ ಸಿ.ಆರ್.ಮುಂಡರಗಿ ಸ್ವಾಗತಿಸಿದರು. ಶಿಕ್ಷಕಿ ಗೌರಿ ಹಡಪದ ನಿರೂಪಿಸಿದರು. ಕಲ್ಲಮ್ಮ ಹೆಬಸೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

