ಗದಗ

ಕಥಾ ಕೀರ್ತನ ಸಾಹಿತ್ಯ ವೈಭವ ಕಳೆದುಕೊಂಡಿಲ್ಲ

Published On :

ಗದಗ: ಪ್ರಾಚೀನ ಕಾಲದಿಂದಲೂ ಕೀರ್ತನ ಸಾಹಿತ್ಯ ತನ್ನದೆ ಆದ ವಿಶಿಷ್ಟತೆಯನ್ನು ಮೆರೆದಿದೆ. ಕೀರ್ತನೆ ಸಂಗೀತದ ನಾದ ಮಾಧುರ್ಯದೊಂದಿಗೆ ತನ್ನ ವೈಭವವನ್ನು ಕಥಾ ಕೀರ್ತನ ಸಾಹಿತ್ಯ ತೋರಿಸಿಕೊಟ್ಟಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಕೀರ್ತನಕಾರ ಆರ್. ಶರಣಬಸವಶಾಸ್ತ್ರಿ ಇಳಕಲ್ಲ ಹೇಳಿದರು.
ಈಚೆಗೆ ಅವರು ನಗರದ ತಾಪಂ ಆವರಣದಲ್ಲಿರುವ ಜಿಲ್ಲಾ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-32 ರಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ಮೂಲ ಕೀರ್ತನಗಳ ಹರಿಕಾರ ನಾರದನಾಗಿದ್ದು, ಆ ಪರಂಪರೆಯಲ್ಲಿ ಬೆಳೆದು ಬಂದ ಕೀರ್ತನ ಸಾಹಿತ್ಯ ಪ್ರಾಚೀನ ಕಾಲದ ಎಲ್ಲ ಕವಿಗಳು ಕೀರ್ತನಗಳಿಗೆ ಮಹತ್ವವನ್ನು ನೀಡಿದ್ದಾರೆ. ದೇವರು, ಗುರು ಮೊದಲಾದವರುಗಳನ್ನು ಭಕ್ತಿಪೂರ್ವಕವಾಗಿ ಆರಾಧಿಸುವುದನ್ನು ಕೀರ್ತನದಲ್ಲಿ ಕಾಣುತ್ತೇವೆ. ವ್ಯಾಸ ಪದ್ಧತಿಯ ತರುವಾಯ ದಾಸಪದ್ಧತಿಯಲ್ಲಿ ಕೀರ್ತನಗಳು ಉದ್ಭವವಾದವು. ಮಹಾರಾಷ್ಟ್ರದ ವಾರಕರಿ ಪದ್ಧತಿಯಲ್ಲಿ ಕೀರ್ತನ ಸಾಹಿತ್ಯ ಬೆಳೆದುಬಂದಿತು. ಕುರ್ತಕೋಟಿಯ ಶ್ರೀಪಾದ ಶಾಸ್ತ್ರಿಗಳು, ನಲವಡಿಯ ಶ್ರೀಕಂಠ ಶಾಸ್ತ್ರಿಗಳು, ಶ್ರೇಷ್ಠ ಕೀರ್ತನಕಾರರಾಗಿದ್ದರು. ಪಂಚಾಕ್ಷರ ಗವಾಯಿಗಳು ಮೈಸೂರು ಮಹಾರಾಜರ ಆಸ್ಥಾನದಲ್ಲಿ ರಾಜಶೇಖರ ವಿಳಾಸದ ಕೀರ್ತನೆಯನ್ನು ನಡೆಸಿದ್ದು ವಿಶೇಷವಾಗಿದ್ದು, ಆ ಹಿನ್ನೆಲೆಯಲ್ಲಿ ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಅಷ್ಟಾವರಣ ಕೀರ್ತನ ಎಂಬ ಪುಸ್ತಕ ರಚಿಸಿ ಕೀರ್ತನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು.  
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಪ್ರಾ. ಕೆ.ಎಚ್.ಬೇಲೂರ, ಕೆ.ವಿ.ಕಣ್ಣೂರು, ಡಾ. ರಾಜಶೇಖರ ದಾನರಡ್ಡಿ, ಪ್ರಭು ಗಂಜಿಹಾಳ, ರಾಮಚಂದ್ರ ಹಂಸನೂರ, ಶಂಕರ ಪೂಜಾರ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ, ಪ್ರೊ. ಸಿ.ಜಿ. ಹುಡೇದಗಡ್ಡಿ, ವಿನೋದ ಆರಿ, ದತ್ತಪ್ರಸನ್ನ ಪಾಟೀಲ, ತಾಲೂಕು ಕಸಾಪ ಗೌ.ಕಾರ್ಯದರ್ಶಿ ಶಶಿಕಾಂತ ಕೋರ್ಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು. ರಾಜಶೇಖರಯ್ಯ ಕಾಲವಾಡಮಠ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.