ಕ್ವಿಟ್ ಇಂಡಿಯಾ ಚಳವಳಿ ಸ್ವಾತಂತ್ರ್ಯಕ್ಕೆ ಪೂರಕ
ಗದಗ: ಕ್ವಿಟ್ ಇಂಡಿಯಾ ಚಳವಳಿ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿ ಪರಿಣಮಿಸಿತು ಎಂದು ನ್ಯೂ ಎಕ್ಸ್‌ಲೆಂಟ್‌ನ ನಿರ್ದೇಶಕ ಎಂ.ಎಸ್. ಹುಲ್ಲೂರ ಹೇಳಿದರು.
ಅವರು ಬುಧವಾರ ಮಹೇಂದ್ರಕರ್ ಸರ್ಕ್‌ಲ್ ಬಳಿ ಇರುವ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ನಾಡಕವಿ ಹುಯಿಲಗೋಳ ನಾರಾಯಣರಾಯ ಕಲಾ ಮತ್ತು ಸಂಸ್ಕೃತಿ ಸಮಿತಿ ಗದಗ ಹಾಗೂ ಸಿಜಿಬಿ ಎಚ್. ರಂಗಭೂಮಿ ಮಿತ್ರ ಮಂಡಳಿ ಆಶ್ರಯದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿ ಆಚರಣೆ ಸಮಾರಂಭದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಪೂಜಾ ಬೇವೂರ ಕ್ವಿಟ್ ಇಂಡಿಯಾದ ಪ್ರಸಂಗದಲ್ಲಿ ಹಾಗೂ ಸ್ವತಂತ್ರ ಪಡೆಯುವಲ್ಲಿ ಕಸ್ತೂರಿಬಾ, ಕಿತ್ತೂರ ಚನ್ನಮ್ಮ, ರಾಣಿ ಅಬ್ಬಕ್ಕಾ, ಬೆಳವಡಿ ಮಲ್ಲಮ್ಮ ಅನೇಕ ಮಹಿಳಾ ಮಣಿಗಳು ಪ್ರಾಣದ ಹಂಗು ತೊರೆದು ಹೋರಾಡಿದರು ಎಂದರು. ಸಮಿತಿಯ ಉಪಾಧ್ಯಕ್ಷ ಎನ್.ಕೆ. ಕೋರ್ಲಹಳ್ಳಿ ಮಾತನಾಡಿ, ನಾಡಿನ, ದೇಶದ ಹಬ್ಬಗಳನ್ನು ಸಮಯಾನುಸಾರವಾಗಿ ಆಚರಿಸಿ ಜನರಿಗೆ ಪ್ರಜ್ಞೆ ಮೂಡಿಸುವ ಕೆಲಸವನ್ನು ನಮ್ಮ ಸಮಿತಿ ಮಾಡುವುದರೊಂದಿಗೆ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಸಂಸ್ಥಾಪಕ ಅಧ್ಯಕ್ಷ, ಹಿರಿಯ ನಾಟಕಕರಾದ ಸಿ.ಜಿ.ಬಿ. ಹಿರೇಮಠ ಮಾತನಾಡಿ, ಅನೇಕತೆಯಲ್ಲಿ ಏಕತೆಯನ್ನು ನಾವು ಕಾಯ್ದುಕೊಳ್ಳಬೇಕು. ನಮ್ಮೆಲ್ಲರ ಪ್ರಾಣಕ್ಕಿಂತ ದೇಶ ಮುಖ್ಯ. ನಾಡು, ನುಡಿ, ಸಂಸ್ಕೃತಿ ಮುಖ್ಯವಾಗಿ ಇಟ್ಟುಕೊಂಡು ಸ್ವಾರ್ಥಕ್ಕೆ ದೇಶವನ್ನು ಒಡೆಯಲು ಪ್ರಯತ್ನಿಸಬಾರದು. ಹಿಂದೆ ನಮ್ಮ ಸಲುವಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟು ಸ್ವಾತಂತ್ರ್ಯವನ್ನು ತಂದುಕೊಟ್ಟ ನಾಯಕರು, ಹೋರಾಟಗಾರರ ಬಗ್ಗೆ ಸದಾ ಅಭಿಮಾನ ಹೊಂದಿರಬೇಕು ಎಂದರು.
ರಾಜೇಶ್ವರಿ ದಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಒನಕೆ ಓಬವ್ವನ ನಾಟಕವನ್ನು ಮೇಘಾ ಅಬ್ಬಿಗೇರಿ, ಈರಮ್ಮ ಅಂಗಡಿ ನೆರವೇರಿಸಿದರು. ಪಾರ್ವತಿ ಬಳ್ಳಾರಿ, ಶ್ರೀಕಾಂತ ಆಲೂರ, ಸಾವಿತ್ರಿ ಎಲಿಗಾರ, ದೀಪಾ ಪಟ್ಟಣ, ರಂಗನಾಥ ದಾಸರ, ವಿ.ಎಸ್. ಢಾಲಾಯತ, ಪ್ರಶಾಂತ ಹಿರೇಮಠ, ಸಿದ್ದೇಶ ಕಣಗಿನಹಾಳ, ಸುಧಾ ಹೂಗಾರ, ರಾಘವೇಂದ್ರ ಶ್ರೀಧರ, ಯಾಸ್ಮಿನ, ಶಶಿಕುಮಾರ, ಜಯವ್ವ ಮುಂತಾದವರು ಹಾಜರಿದ್ದರು. ಬಿರೇಶ ಪೂಜಾರ ವಂದಿಸಿದರು. ಮಹಾಂತೇಶ ನಾಯಕವಾಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

