ಗದಗ

ಡಾ. ಉಮೇಶ ಪುರದ ಸೇವೆ ಶ್ಲಾಘನೀಯ: ತೋಂಟದ ಶ್ರೀ

Published On :

ಗದಗ: ಡಾ. ಉಮೇಶ್ ಪುರದ ಅವರು ಆಯುರ್ವೇದ ವೈದ್ಯಕೀಯ ರಂಗದಲ್ಲಿ ಸಲ್ಲಿಸಿದ ಸೇವೆ ಶ್ಲಾಘನೀಯ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಡಾ. ಉಮೇಶ ಪುರದ ಅವರ 50ನೇ ಹುಟ್ಟುಹಬ್ಬ ಹಾಗೂ ಅವರ ವೈವಾಹಿಕ ಬದುಕಿನ ರಜತ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೈದ್ಯಕೀಯ ವೃತ್ತಿ ಎನ್ನುವುದು ಒಂದು ಆರಾಧನೆ, ಅದೊಂದು ಪೂಜೆಯಂತೆ. ಸಾರ್ಥಕ ಸೇವೆ ಮಾಡಿದ ಡಾ. ಪುರದ ಅವರ ಕಾರ್ಯ ಇತರೇ ವೈದ್ಯರಿಗೆ ಮಾದರಿ ಎಂದರು. ಅಭಿನಂದನಾ ಗ್ರಂಥ ಆತ್ರೇಯ ಲೋಕಾರ್ಪಣೆ ಮಾಡಿದ ಜ. ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಚೇರ್‌ಮನ್ ಎಸ್.ಬಿ. ಸಂಶಿ ಮಾತನಾಡಿದರು. ಆತ್ರೇಯ ಅಭಿನಂದನಾ ಗ್ರಂಥವನ್ನು ಸಂಪಾದಿಸಿದ ಪ್ರೊ. ಸಿದ್ದು ಯಾಪಲಪರವಿ, ಶಿವಾನಂದ ಮಠದ ಜ. ಅಭಿನವ ಶಿವಾನಂದ ಶ್ರೀಗಳು, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಬಿ.ಜಿ.ಪಾಟೀಲ ಮಾತನಾಡಿದರು. ಎಫ್.ಪಿ. ಮಠದ, ವೀರಣ್ಣ ಪುರದ, ಆಯುರ್ವೇದ ವೈದ್ಯ ಡಾ. ಸಮೀರ ನಾಯಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ವಾಗೀಶ ಪಂಡಿತಾರಾಧ್ಯ, ರುದ್ರಯ್ಯಜ್ಜನವರು, ಕಾರ್ಯಾಧ್ಯಕ್ಷ ಡಾ. ಎಸ್.ಡಿ. ಯರಗೇರಿ ಇದ್ದರು. ಸಮಿತಿಯ ಗೌರವಾಧ್ಯಕ್ಷ ಪ್ರೊ. ಎಸ್.ವಿ.ಸಂಕನೂರ ಸ್ವಾಗತಿಸಿದರು. ಪ್ರೊ. ಅನ್ನದಾನಿ ಹಿರೇಮಠ ಹಾಗೂ ಶಿಕ್ಷಕ ಎಸ್.ಎಂ. ವಾಲಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.