ನೌಕರರಿಗೆ ಕಿರುಕುಳಮುಕ್ತ ವಾತಾವರಣ: ಭಾವಿಮನಿ
ಮುಂಡರಗಿ: ತಾಲೂಕಿನ ಎಲ್ಲ ನೌಕರರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ನೌಕರರ ಭವನದ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಸರ್ಕಾರಿ ನೌಕರರು ಯಾವುದೇ ಕಿರುಕುಳವಿಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಿಸುವುದು ನಮ್ಮ ಗುರಿ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎಂ.ಡಿ. ಭಾವಿಮನಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ನೌಕರರ ಸಂಘ ತಾಲೂಕಿನಲ್ಲಿ ಒಳ್ಳೆಯ ಕೆಲಸ ಮಾಡುತ್ತ ಬಂದಿದೆ. ಎಲ್ಲ ನೌಕರರು ಒಂದೇ ಮನೆಯವರಂತೆ ಇರುವುದರಿಂದಲೇ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಎಲ್ಲರೂ ಒಟ್ಟಾಗಿ ಸೇರಿ ನಮ್ಮ ಸಮಸ್ಯೆಗಳು ಮತ್ತು ನಮಗೆ ಸಿಗುವ ಸೌಲಭ್ಯಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯೋಣ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ಮೋಹನ ಮಾತನಾಡಿ, ಈ ತಾಲೂಕಿನಲ್ಲಿ ನೌಕರರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಿದ್ದು ಸಂತೋಷ ತಂದಿದೆ. ಈ ತಾಲೂಕು ಇತರೆ ತಾಲೂಕುಗಳಿಗೆ ಮಾದರಿಯಾಗಿದೆ. ಇಂತಹ ವಾತಾವರಣ ಎಲ್ಲ ತಾಲೂಕುಗಳಿಗೂ ಬರಲಿ. ನೌಕರ ಭವನದ ನಿರ್ಮಾಣಕ್ಕೆ ಎಲ್ಲ ತರಹದ ಸಹಕಾರ ನೀಡುವುದಾಗಿ ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿದರು. ಸಂಘದ ಮಾಜಿ ಉಪಾಧ್ಯಕ್ಷ ಎಂ.ಕೆ. ಕಾಳೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯ ಸದಸ್ಯ ಯು.ಬಿ. ಸಜ್ಜರ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಹಿರೇಮಠ ಉಪಸ್ಥಿತರಿದ್ದರು.
ಶ್ರೀರಾಮ ಕುಲಕರ್ಣಿ, ಲಚ್ಚಪ್ಪ ನಾಯಕ, ಯು.ಬಿ. ಸಜ್ಜನ, ವಿ.ಎನ್.ಪೂಜಾರ, ಆರ್.ಬಿ. ಹೊಸಕೇರಿ, ಕೆ. ಕೊಟ್ಟೂರಯ್ಯ, ಶಮಶಾದಬೇಗಂ ದಂಡಿನ, ಡಾ. ವಾದಿರಾಜ್ ತಂಗೋಡ, ಆರ್.ಎನ್. ಬನ್ನಟ್ಟಿ, ಬಸವರಾಜ ಬಳ್ಳಾರಿ, ಶಿವಶಂಕ್ರಪ್ಪ ಅರಳಿ, ಸುರೇಶ ಹಡಪದ, ಶಂಕರಲಿಂಗ ಕೋರಿ, ಮಂಜುನಾಥ ಕಿಲಬನವರ, ಸುರೇಖಾ ಕೆಂಗುಡ್ಡಪ್ಪನವರ, ವೀರಣ್ಣ ಹುಬ್ಬಳ್ಳಿ, ಮನೋಹರ ಕಾಳೆ, ಬಿ.ಜಿ. ಚನ್ನಳ್ಳಿ, ಅವಿನಾಶ ಗೋಟಕಿಂಡಿ, ಜೆ.ಕೆ. ಉಳ್ಳಟ್ಟಿ, ಎಸ್.ಪಿ. ಹೊಸಳ್ಳಿ, ಎಂ.ಎ. ನದಾಫ್, ಎಸ್.ವಿ. ವಾಯಿ ಇವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಆರ್.ಎನ್. ಬನ್ನಟ್ಟಿ ಸ್ವಾಗತಿಸಿದರು. ಸಿಡಿಪಿಓ ಇಲಾಖೆಯ ಅವಿನಾಶ ಗೋಟಕಿಂಡಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

