ಗದಗ

ಕುಡಿವ ನೀರಿಗಾಗಿ ಪುರಸಭೆಗೆ ಮುತ್ತಿಗೆ

Published On :

ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿಯ (ವಾರ್ಡ್ 3) ಜನರು ಸೋಮವಾರ ಪುರಸಭೆಗೆ ದಿಢೀರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಕುಡಿಯುವ ನೀರಿಗಾಗಿ ಪ್ರತಿ ದಿನ ಜಗಳವಾಡುವುದು ಮಾಮೂಲಿಯಾಗಿದೆ. ಇರುವ ಒಂದೇ ಸಾರ್ವಜನಿಕ ನಳದಲ್ಲಿ ನೂರಾರು ಕುಟುಂಬಗಳು ನೀರನ್ನು ಹಿಡಿದುಕೊಂಡು ಜೀವನ ಸಾಗಿಸಬೇಕಾಗಿದೆ. ಕುಡಿಯುವ ನೀರಿಗಾಗಿ ತೋಳ್ಬಲ ಪ್ರದರ್ಶನ ನಡೆಯುತ್ತಿದೆ. ಬಲಿಷ್ಠರು ನಿರಾಯಾಸವಾಗಿ ನೀರನ್ನು ಹಿಡಿದುಕೊಳ್ಳುತ್ತಾರೆ. ಅದಕ್ಕಾಗಿ ಪುರಸಭೆಯ ಮುಖ್ಯಾಧಿಕಾರಿಗಳು ನಮ್ಮ ಓಣಿಯ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪುರಸಭೆಯ ಸದಸ್ಯ ಗಣೇಶ ಬೇವಿನಮರದ ಸಾರ್ವಜನಿಕರೊಂದಿಗೆ ಆಗ್ರಹಿಸಿದರು.
ಪಟ್ಟಣದಲ್ಲೇ ಅತಿ ಹಿಂದುಳಿದ ಪ್ರದೇಶವಾದ ಕೆಂಚಲಾಪುರ ಓಣಿಯಲ್ಲಿ ಹಲವಾರು ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ ಎಂದು ಅಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಾಧಿಕಾರಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಬೇರೆ ಕಡೆಗಳಲ್ಲಿ ಸಾರ್ವಜನಿಕ ನಳಗಳನ್ನು ಹಾಕುವ ಕಾರ್ಯವನ್ನು ಮಾಡುತ್ತೇವೆ. ತಕ್ಷಣವೇ ಸಮರ್ಪಕ ಸೇವೆ ನೀಡುವುದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಪಾರಮ್ಮ ಹಣಗಿ, ಯಲ್ಲಮ್ಮ ಹಣಗಿ, ಮುತ್ತು ಬುರಡಿ, ಮಹಾಂತೇಶ ಕಣವಿ, ಮೈಲಾರೆಪ್ಪ ಪಗಡಿ, ಮಂಜುನಾಥ ಲಪಾಟಿ, ಪ್ರಶಾಂತ ಬೆಳ್ಳಟ್ಟಿ, ನೀಲಕಂಠ ಹಣಗಿ, ಅಕ್ಕಮ್ಮ ಕಣವಿ, ನಾಗವ್ವ ಕಣವಿ, ಪಾರವ್ವ ಕಣವಿ, ಮಲ್ಲಪ್ಪ ಹಲಗೋಡದ, ಗಿರಿಜವ್ವ ಕಣವಿ, ನಿರ್ಮಲಾ ಉದ್ದನಗೌಡರ, ಮಲ್ಲಕ್ಕ ಬೆಳ್ಳಟ್ಟಿ, ನಿರ್ಮಲಾ ಆದಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.