ಅನ್ನ ದಾಸೋಹ ಭಕ್ತರ ಶ್ರೇಯಸ್ಸು ಹೆಚ್ಚಿಸುತ್ತದೆ
ಕನ್ನಡಪ್ರಭ ವಾರ್ತೆ, ಗದಗ, ಆ. 13
ಅನ್ನ ದಾಸೋಹ ಶ್ರೇಯಸ್ಸು ಭಕ್ತರಿಗೆ ಸಲ್ಲುತ್ತದೆ ಎಂದು ವೀರೇಶ್ವರ ಪುಣ್ಯಾಶ್ರಮ ಪ.ಪೂ. ಕಲ್ಲಯ್ಯಜ್ಜನವರು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರಾವಣ ಮಾಸ ಮೊದಲ ಸೋಮವಾರ ಪ್ರಯುಕ್ತ ನಾರಾಯಣದಾಸ ವಜ್ರೇಶ್ವರಿ ವರ್ತಕರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ ಸಾಮೂಹಿಕ ಅನ್ನದಾಸೋಹ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಮೂಡಿಸಲಿವೆ. ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಲಿವೆ. ಇಂತಹ ಕಾರ್ಯವನ್ನು 22 ವರ್ಷಗಳಿಂದ ನಾರಾಯಣದಾಸ ವಜ್ರೇಶ್ವರಿ ಗೆಳೆಯರ ಬಳಗ ನಡೆಸಿಕೊಂಡು ಬರುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದರು.
ಸಿದ್ದಣ್ಣ ಮುನವಳ್ಳಿ, ನಾರಾಯಣದಾಸ ವಜ್ರೇಶ್ವರಿ, ಶಿವಣ್ಣ ಪಲ್ಲೇದ, ಗಂಗಣ್ಣ ಮುನವಳ್ಳಿ, ರಮೇಶ ಕೊರವಣ್ಣವರ, ಜುಮ್ಮಣ್ಣ ಹುಡೇದ, ಇರಪಣ್ಣ ಬಳ್ಳೋಳ್ಳಿ, ಈಶಪ್ಪ ಪಟ್ಟಣಶೆಟ್ಟಿ, ಶಿವಾನಂದ ಕಲ್ಯಾಣಿ, ಸುರೇಶ ಹೊಸಮನಿ ಮುಂತಾದ ವರ್ತಕರು ಉಪಸ್ಥಿತರಿದ್ದರು.
ಪತ್ರಕರ್ತ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು. ಫಕೀರಯ್ಯಸ್ವಾಮಿ ಮಾಗಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

