ಗದಗ ಪ್ರಾಗೈತಿಹಾಸಕ್ಕೆ ನಿಜ ನೆಲೆಯಾಗಿದೆ
ಗದಗ: 2-3 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಬೆಟ್ಟ ಗುಡ್ಡಗಳ ಬಯಲು ಪ್ರದೇಶ ನದಿ ಮೂಲದ ಭೂಮಿಗಳ ಪ್ರಾಗೈತಿಹಾಸಕ್ಕೆ ಗದಗ ಜಿಲ್ಲೆ ನೆಲೆಯಾಗಿದೆ ಎಂದು ಪ್ರಾಚ್ಚ್ಯ ವಸ್ತು ಸಂಗ್ರಾಲಯದ ಹಿರಿಯ ಮಾರ್ಗದರ್ಶಕ ಅ.ದ. ಕಟ್ಟಿಮನಿ ಹೇಳಿದರು.
ಅವರು ಈಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಜೆ ಮಾಲಿಕೆ 33ರಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. ಕೃತು, ಎಂಬುದು ಸಸ್ಯದ ಹೆಸರು ಅದರಿಂದ ಕೃತಪುರವಾಗಿ, ಕರ್ದುಗಿ, ಬೆಳವಲ 300, ಗಜಗು ಎಂದು ಕರೆಯಲ್ಪಡುವ ಗದಗ ಪ್ರಾಚೀನ ಕಾಲದಿಂದಲೂ ಸಂಗೀತ, ಸಾಹಿತ್ಯ, ಶಿಲ್ಪಕಲೆ, ವಾಸ್ತುಶಿಲ್ಪಗಳ ತವರೂರಾದ ಗದುಗಿನಲ್ಲಿ 36 ಬೆಟಗೇರಿಯಲ್ಲಿ 6 ಪ್ರಾಚೀನ ಶಾಸನಗಳು ಇವೆ. ಕ್ರಿ.ಶ. ಪೂರ್ವಕಾಲದಲ್ಲಿ ನರಗುಂದದ ವಾಸನದಲ್ಲಿ ಪ್ರಥಮ ಶಾಸನ ದೊರಕಿದೆ. ಕ್ರಿ.ಶ. 500ರಲ್ಲಿ ಮುಳಗುಂದದಲ್ಲಿ ಹನುಮಪ್ಪನಗುಡಿ, ಲಕ್ಕುಂಡಿಯಲ್ಲಿ ಬೂದಿಬಸವೇಶ್ವರ ಗುಡಿಯಲ್ಲಿ ಆದಿಶಿಲಾಯುಗದ ವಸ್ತುಗಳು ದೊರಕಿದವು ಇದು ಇತಿಹಾಸದ ಬಂಡವಾಳವಾಗಿದೆ. 1008ರ ಕಾಲದಲ್ಲಿ ಗದುಗಿನ ಪ್ರಥಮವಾಗಿ ತ್ರೀಕೂಟೇಶ್ವರ ದೇವಾಲಯ ನಿರ್ಮಾಣವಾಯಿತು. ಮುಂದೆ ವೀರನಾರಾಯಣ, ಸೋಮೇಶ್ವರ ಎಂಬ ತ್ರೈಪುರುಷ ದೇವಾಲಯ ನಿರ್ಮಾಣವಾದವು. ಅವುಗಳಲ್ಲಿ ಗರ್ಭಗುಡಿಯ ಬಾಗಿಲಲ್ಲಿ ಗಜಲಕ್ಷ್ಮಿ ಇದ್ದಾಳೆ. ಗಣಪತಿ, ಬ್ರಹ್ಮ, ವಿಷ್ಣು, ಶಿವ, ಸೂರ್ಯದೇವ, ಸರಸ್ವತಿ ಮೂರ್ತಿಗಳು ಪ್ರಾಚೀನವಾದವು. ವಿಜಯನಗರ ಅರಸರ ಕಾಲದ ಶಾಸನವೊಂದರಲ್ಲಿ ಕುಮಾರವ್ಯಾಸನ ಉಲ್ಲೇಖ ಬರುತ್ತದೆ. ಕುಮಾರವ್ಯಾಸನ ಕನ್ನಡದ ಗಂಡುಮೆಟ್ಟಿನ ಸ್ಥಳ ಗದಗ ಆಗಿದೆ. ಚಾಮರಸನ ಜನ್ಮ ಸ್ಥಳ ನಾಗಣಾಪುರ ಎಂದು 1519ರ ಶಾಸನದಲ್ಲಿ ಉಲ್ಲೇಖವಿದೆ ಎಂದು ಜಿಲ್ಲೆಯ ಸಮಗ್ರ ಇತಿಹಾಸ ಹಾಗೂ ಐತಿಹಾಸಿಕ ಪರಂಪರೆ ಕುರಿತು ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸದಾಶಿವ ದೊಡ್ಡಮನಿ ಕವನ ವಾಚನ ಮಾಡಿದರು. ಡಾ. ಸಂಗಮೇಶ ತಮ್ಮನಗೌಡರ, ಪ್ರಾ. ಕೆ.ಎಚ್. ಬೇಲೂರ, ಪ್ರಾ. ಕೆ.ವಿ. ಕನ್ನೂರ, ಪ್ರಾ. ಜೆ.ಎಂ. ರೇವಡಿಹಾಳ, ನರಗುಂದ ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಕಿಶೋರಬಾಬು ನಾಗರಕಟ್ಟಿ, ವೆಂಕಟೇಶ ಬೇಲೂರ, ಬಿ.ಎಸ್. ಹಿಂಡಿ, ರಾಜಶೇಖರಯ್ಯ ಕಾಲವಾಡಮಠ, ಎಸ್.ಎಫ್. ಹಡಪದ, ಬಸವರಾಜಗೌಡ ಶಿರುಂದ, ಪ್ರೊ. ವಿನಾಯಕ ಕಮತದ, ವಿ.ಬಿ. ಪಠಾಣಿ, ಪ್ರೊ. ದತ್ತಪ್ರಸನ್ನ ಪಾಟೀಲ್, ಅಶೋಕ ಗಿರಡ್ಡಿ, ಎಸ್.ಎಸ್. ಸೂಳಿಕೇರಿ, ಎಚ್.ಡಿ. ಕುರಿ, ಜಯಶ್ರೀ ಶ್ರೀಗಿರಿ ಪಾಲ್ಗೊಂಡಿದ್ದರು. ಶಶಿಕಾಂತ ಕೊರ್ಲಹಳ್ಳಿ ಸ್ವಾಗತಿಸಿದರು. ಡಿ.ಎಚ್. ಮಲ್ಲೇಶ ನಿರೂಪಿಸಿದರು. ಪ್ರಕಾಶ ಗಿಡ್ಡಣ್ಣನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

