ಎಚ್.ಕೆ. ಪಾಟೀಲರ ಜನ್ಮದಿನ ಆಚರಣೆ
ಗದಗ: ನಗರದ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ 60ನೇ ಜನ್ಮ ದಿನದ ನಿಮಿತ್ತ ಎಚ್.ಕೆ. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಜನಪರ ಕಾಳಜಿ, ಶುದ್ಧನೀರಿನ ಹರಿಕಾರ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿ ಚಿಂತಕರಾಗಿದ್ದಾರೆ. ಹಗಲಿರುಳು ಶಮ್ರವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ವತಿಯಿಂದ ಬಡರೋಗಿಗಳಿಗೆ ಹಾಗೂ ಬಡವರಿಗೆ ಧಾನ-ಧರ್ಮ ಮಾಡುವ ಮೂಲಕ ಎಚ್.ಕೆ.ಪಾಟೀಲ ಅವರ ಕೈ ಬಲಪಡಿಸುತ್ತಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಜಂಟಿ ಕಾರ್ಯದರ್ಶಿ ಉಮರಫಾರೂಕ್ ಹುಬ್ಬಳ್ಳಿ, ಶಿವು ನಾಯಕ, ಎಪಿಎಂಸಿ ಸದಸ್ಯ ಶಿವಾನಂದ ಮಾದಣ್ಣವರ, ಠಾಕೂರ ಲಮಾಣಿ, ಹಮಜಪ್ಪ ಬಡಿಗೇರ, ನಂದಕುಮಾರ ಹೊಸಮನಿ, ಜ್ಞಾನೇಶ ಗೋಕುಲೆ, ಮಲ್ಲನಗೌಡ ಪಾಟೀಲ, ರಾಜು ಪೂಜಾರ, ಮಂಜುನಾಥ ಪೂಜಾರ, ವೀರಣ್ಣ ಹಂಪಣ್ಣವರ, ಮಂಜುನಾಥ ಹಂಗನಕಟ್ಟಿ, ಬಸವರಾಜ ಬಟ್ಟೂರ, ಮಹಮ್ಮದಶಾಹಿ ಸುಂಕದ, ಮಹೇಶ ನವಲಗುಂದ, ದುರಗಪ್ಪ ಗೋಣೆಪ್ಪನವರ, ರಮೇಶ ಬಾರಿಗಿಡಿದ, ಮರಿಯಪ್ಪ ಹರಿಜನ, ಚಾಂದಸಾಬ ಕೊಟ್ಟೂರ, ಅನಿಲ ಓದುಗೌಡರ, ಮಲ್ಲನಗೌಡ ಹನಮಂತಗೌಡ್ರ, ಲಕ್ಷ್ಮಣ ಪೂಜಾರ, ಆಶ್ರಫ್ ಹುಬ್ಬಳ್ಳಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

