ವಿವಿಧೆಡೆ 67ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ನಿರ್ದೇಶಕ ಈರಪ್ಪ ಹೊಸಳ್ಳಿ ನೆರವೇರಿಸಿದರು. ಈರನಗೌಡ ಪಾಟೀಲ, ಪ್ರಲ್ಹಾದ ಹೊಸಳ್ಳಿ, ಅರವಿಂದ್ರಪ್ಪ ಚಿಕ್ರಣ್ಣವರ, ಸಹದೇವಪ್ಪ ಹುಲಗಣ್ಣವರ, ದೇವಪ್ಪ ಕಂಬಳಿ, ಬಸವರಾಜ ಕದಾಂಪೂರ ಹಾಲಯ್ಯ ಹಿರೇಮಠ, ಮಹೇಶ ತಳವಾರ ಮುಂತಾದವರು ಇದ್ದರು.
ಅಡವಿಸೋಮಾಪುರ ಗ್ರಾಪಂ: ಇಲ್ಲಿಯ ಗ್ರಾಪಂದಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪಿಡಿಒ ಅಶ್ವಿನಿ ಕುರಡಗಿ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಉಪಾಧ್ಯಕ್ಷೆ ನಾಗವ್ವ ಹುಡೇದ, ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು, ಊರಿನ ನಾಗರಿಕರು ಇದ್ದರು.
ಸಿಂಡಿಕೇಟ್ ಬ್ಯಾಂಕ್: ಅಡವಿಸೋಮಾಪುರ ಗ್ರಾಮದ ಸಿಂಡಿಕೇಟ್ ಬ್ಯಾಂಕ್ನಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಬ್ಯಾಂಕ್ ಮ್ಯಾನೇಜರ್ ಟಿ.ಇ. ಸುರೇಂದ್ರ ನೆರವೇರಿಸಿದರು. ಗ್ರಾಪಂ ಸದಸ್ಯ ಮಾಬುಸಾಬ ಹರಿವಾಣ, ಹನಮಂತ ಪುರದ, ಬ್ಯಾಂಕ್ ಸಿಬ್ಬಂದಿ ವರ್ಗ, ಬ್ಯಾಂಕ್ನ ಗ್ರಾಹಕರು ಸೇರಿದಂತೆ ಇತರರು ಇದ್ದರು. ಅಲ್ಲದೇ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ಎಸ್.ಡಿ.ಉಮ್ಮಣ್ಣವರ ನೆರವೇರಿಸಿದರು. ನಿವೃತ್ತ ಶಿಕ್ಷಕ ಎಸ್.ಡಿ. ತಳವಾರ, ವಾಸಪ್ಪ ಹೊಸಳ್ಳಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಗ್ರಾಮದ ಜಾಮೀಯಾ ಮಸೀದಿಯಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಾಶೀಮಸಾಬ ಹರಿವಾಣ ನೆರವೇರಿಸಿದರು. ಜಿನ್ನೆಸಾಬ ಮುಲ್ಲಾನವರ, ದಾವಲಸಾಬ ಕುಮನೂರ, ರಾಜೇಸಾಬ ಪೆಂಡಾರ, ಭೀಮಪ್ಪ ಹಿರೇತನದ, ಗಣೇಶ ಜಡಿ ಸೇರಿದಂತೆ ಇತರರಿದ್ದರು.
ಗಜೇಂದ್ರಗಡ: ಗಜೇಂದ್ರಗಡದ ಸ್ಥಳೀಯ ಪುರಸಭೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಧ್ವಜಾರೋಹಣ ನೆರವೇರಿಸಿದರು. ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ, ಉಪನೋಂದಣಾಧಿಕಾರಿ ಎಂ.ಬಿ. ದುಮ್ಮಾಳ, ಪುರಸಭೆ ಸದಸ್ಯ ಅಶೋಕ ವನ್ನಾಲ, ಕವಿತಾ ಜಾಲಿಹಾಳ, ವಿಜಯ ರಾಯಬಾಗಿ, ರವಿ ಕಲಾಲ, ಶರಣಪ್ಪ ರೇವಡಿ, ಎಚ್.ಎಸ್. ಸೋಂಪುರ, ಶೇಕಣ್ಣ ಇಟಗಿ, ಸಾವಿತ್ರಿಬಾಯಿ ನಿಂಬಾಳ್ಕರ ಪಾಲ್ಗೊಂಡಿದ್ದರು.
ಸ್ಥಳೀಯ ಬಜರಂಗದಳ ವೃತ್ತದಲ್ಲಿ ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಬುಧವಾರ ಮಧ್ಯರಾತ್ರಿ ಧ್ವಜಾರೋಹಣ ಮಾಡಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಿದರು. ಅಲ್ಲದೇ ವಿಶೇಷ ತಹಸೀಲ್ದಾರ್ ಕಚೇರಿ, ಉಪನೋಂದಣಿ ಸೇರಿದಂತೆ ಸ್ಥಳೀಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ, ಸುತ್ತಲಿನ ಗ್ರಾಮಗಳಲ್ಲಿ 67ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ನಡೆಯಿತು. ಕೆಲವೆಡೆ ಸ್ವಾತಂತ್ರ್ಯೋತ್ಸವ ಮುನ್ನಾ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಡಂಬಳ ಕೈಗಾರಿಕಾ ತರಬೇತಿ ಸಂಸ್ಥೆ: ಗದಗ ತಾಲೂಕಿನ ಡಂಬಳದ ಜ. ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 67ನೇ ಸ್ವಾತಂತ್ರ್ಯ ದಿನೋತ್ಸವ ಆಚರಿಸಲಾಯಿತು. ಮದರ್ಧನಾರೀಶ್ವರ ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಸಿ.ಆರ್. ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಸ್.ಎಂ. ಶಿವರಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸರ್ವ ಸಿಬ್ಬಂದಿ ಇದ್ದರು. ದೊಡ್ಡಪ್ಪ ಹಡಪದ ಪ್ರಾರ್ಥಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎಸ್.ಎಸ್. ಕುಂಬಾರ ನಿರೂಪಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಕೆ.ಆರ್. ಕೋರಿ ವಂದಿಸಿದರು.
ಮುಳಗುಂದ: ಮುಳಗುಂದ ಪಟ್ಟಣದ ಚಿಂದಿಪೇಟೆ ಚಿಂಚಲಿ ಕ್ರಾಸ್ನಲ್ಲಿ ಪಪಂ ಸದಸ್ಯ ಎಂ.ಎಸ್. ಕಣವಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೆರಿಸಿದರು. ಮಾಹಾಂತೇಶ ಕಣವಿ, ಎ.ಬಿ. ಮಜ್ಜಿಗುಡ್ಡ, ಪ್ರಕಾಶ ಮದ್ದಿನ, ಶಂಕ್ರಯ್ಯ ಗವಿಮಠ, ಮುತ್ತು ಕ್ಷೌರದ, ಮಹಾಂತೇಶ ಸೌವದತ್ತಿ, ಸಿ.ಕೆ. ಭಜಂತ್ರಿ, ಪ್ರಕಾಶ ಕಳ್ಳಿಮನಿ, ಪಂಪಾಪತಿ ಹಳ್ಳಿ, ಹನಮಂತ ಕಟ್ಟಿಮನಿ, ಎಸ್.ಸೋಮಾಪುರ, ಬಿ.ಸಿ. ಬಂಗಾರಿ ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡ ಜಾಗೃತಿ ವೇದಿಕೆ: ಗದಗನ ನಗರದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ 67ನೇ ಸ್ವಾತಂತ್ರ್ಯೋತ್ಸವವನ್ನು ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಸಂಸ್ಥೆಯ ಪ್ರಧಾನ ಗುರುಮಾತೆ ದಿಪೀಕಾ ಸಾವಂತ, ಕನ್ನಡ ಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ, ಚೇತನ್ಕುಮಾರ ಹುಡೇದ ಮಾತನಾಡಿದರು. ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ಗೋಕಾವಿ, ಭೂಷಣ್ ಅಣ್ಣಿಗೇರಿ, ನಾಗರಾಜ ಪೊಲೀಸ್ಪಾಟೀಲ, ಮಾಂತೇಶ ಪಿಡ್ಡನಗೌಡ್ರ, ಶೇಖರಗೌಡ ಮಲ್ಲನಗೌಡ್ರ, ಶರಣಯ್ಯ ರೇವಣಕಿ, ಅಕ್ಷತಾ ಕಿತ್ತೂರ ಮುಂತಾದವರು ಇದ್ದರು.
ನೇಲ್ಸನ್ ಮಂಡೇಲಾ ಶಾಲೆ: ಗದಗನ ರಾಜೀವಗಾಂಧಿ ನಗರದ ನೆಲ್ಸನ್ ಮಂಡೆಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಗೌರವಾಧ್ಯಕ್ಷ ಮೋಹನ ಆಲಮೇಲಕರ ನೆರವೇರಿಸಿ ಮಾತನಾಡಿದರು. ವಿಜಯಲಕ್ಷ್ಮಿ ಕಡೇಮನಿ, ಸಂಸ್ಥೆಯ ಅಧ್ಯಕ್ಷ ಕಡೇಮನಿ, ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಸಿಬ್ಬಂದಿ ಇದ್ದರು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು.
ರವಿವರ್ಮಾ ಪೇಂಟರ್ಸ್ ಅಸೋಸಿಯೇಶನ್: ಗದಗ ನಗರದ ಟಿಳಕ್ ಪಾರ್ಕ್ನಲ್ಲಿ ರವಿವರ್ಮಾ ಪೇಂಟರ್ಸ್ ಅಸೋಸಿಯೇಶನ್ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 67ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಶೇಖಪ್ಪ ಶಿಶ್ವನಿಹಳ್ಳಿ ನೆರವೇರಿಸಿದರು. ಪಿರೋಜ ಹಬ್ಬುನವರ, ಯೇಸುಜಾನ ಶೌರಿ, ಅಶೋಕ, ಪಾಂಡುರಂಗ, ಮಂಜುನಾಥ ನೆಗಳೂರು, ವೆಂಕಪ್ಪ ತೆಂಗುಟಿ, ಬಸವರಾಜ ಪಾಟೀಲ, ರಾಮು ನಾಯ್ಡು, ರಾಜು ಮುರಗೇಶ, ಶಿವಯೋಗಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

