ಕೆರೆ ಮಣ್ಣು ಸಾಗಾಟ: ವಾಹನ ತಡೆದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ.16
ಸ್ಥಳೀಯ ಬೆಟ್ಟದ ಬಳಿಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಿರುವ ಕೆರೆಯಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಕಾಂಗ್ರೆಸ್ ಮುಖಂಡರು, ಶುಕ್ರವಾರ ಸ್ಥಳಕ್ಕೆ ದೌಡಾಯಿಸಿ ಮಣ್ಣು ತುಂಬಿದ ವಾಹನ ತಡೆದು ಪ್ರತಿಭಟನೆ ನಡೆಸಿದರು.
ಬಳಿಕ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಭಾನಸಾಬ ಆರಗಿದ್ದಿ ಮಾತನಾಡಿ, ಗುಡ್ಡದಿಂದ ಹರಿದು ಬರುವ ಮಳೆ ನೀರು ಪೋಲಾಗಬಾರದೆಂಬ ಉದ್ದೇಶದಿಂದ ಬೆಟ್ಟದ ಕೆಳ ಭಾಗದಲ್ಲಿ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ರು. 6 ಕೋಟಿ ಅನುದಾನ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಕೆರೆ ನಿರ್ಮಿಸಿದ ಕೆಲ ತಿಂಗಳಲ್ಲಿಯೇ ಕೆರೆಯ ಒಡ್ಡು ಬಿರುಕು ಬಿಟ್ಟು ದುರ್ಬಲಾವಸ್ಥೆಗೆ ತಲುಪಿದೆ. ಈಗ ಇದೇ ಸ್ಥಳದಲ್ಲಿ ಸಂಬಂಧಿಸಿದ ಇಲಾಖೆಯ ಯಾವುದೇ ಪರವಾನಗಿ ಪಡೆಯದೆ ಕೆಲ ತಿಂಗಳಿಂದ ಅವ್ಯಾಹತವಾಗಿ ಗುತ್ತಿಗೆದಾರ ನಾಗೇಶ ಲಕ್ಕಲಕಟ್ಟಿಯವರು ಅಕ್ರಮ ಮಣ್ಣು ಅಗೆದು ಸಾಗಣೆ ಮಾಡುತ್ತಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಜತೆಗೆ ಅಧಿಕಾರಿಗಳ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿದರು.
ಕೆರೆಯಲ್ಲಿ ಮಣ್ಣು ಅಗೆದಿರುವುದರಿಂದ ದೊಡ್ಡ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ಇಲ್ಲಿ ಈಜಲು ಹೋಗಿ ಇರ್ವರು ಪ್ರಾಣ ಕಳೆದುಕೊಂಡಿದ್ದುಂಟು. ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಕ್ರಮ ಮಣ್ಣು ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಜರುಗಿಸಿ ಸಾಗಾಟಕ್ಕೆ ಬಳಸಿರುವ ವಾಹನ ಯಂತ್ರಗಳನ್ನು ವಶಪಡಿಸಿಕೊಳ್ಳುಬೇಕೆಂದು ಪಟ್ಟು ಹಿಡಿದರು.
ಬಳಿಕ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಣಪತಿ ಸಿಂಗ್ ಅವರನ್ನು ದೂರವಾಣಿ ಮೂಲಕ ಪ್ರತಿಭಟನಾಕಾರನ್ನು ಸಂಪರ್ಕಿಸಿ ಕೆರೆಯಲ್ಲಿನ ಮಣ್ಣು ಅಗೆಯಲು ಯಾರಿಗೂ ಪರವಾನಗಿ ನೀಡಿರುವುದಿಲ್ಲ. ಅಕ್ರಮವಾಗಿ ಮಣ್ಣು ಅಗೆದು ಸಾಗಾಟಮಾಡುತ್ತಿರುವ ಗುತ್ತಿಗೆದಾರ ನಾಗೇಶ ಲಕ್ಕಲಕಟ್ಟಿಯವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು. ಅಧಿಕಾರಿಗಳ ಭರವಸೆಯನ್ವಯ ಪ್ರತಿಭಟನೆಯನ್ನು ಹಿಂಪಡೆದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಮೋಹನಸಾ ರಾಯಬಾಗಿ, ಗಿರೀಶ ರಂಗ್ರೇಜ, ಹಸನ ತಟಗಾರ, ಶ್ರೀಧರ ಗಂಜಿಗೌಡ್ರ, ನ್ಯಾಯವಾದಿ ಶ್ರೀಕಾಂತ ಅವಧೂತ, ಮುರ್ತುಜಾ ಡಾಲಾಯತ್, ಮಾಬುಸಾಬ ಚಿನ್ನೂರ, ಭೀಮಶಿ ತಳವಾರ, ಬಾಬಣ್ಣ ನದಾಫ, ನಾಸೀರ ಸುರಪುರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

