ಧಾರವಾಡಕ್ಕೆ ಹೈಕೋರ್ಟ್ ಪೀಠ: ಸ್ವಾಗತಾರ್ಹ
ಕನ್ನಡಪ್ರಭ ವಾರ್ತೆ, ಗದಗ, ಆ. 20
ಧಾರವಾಡಕ್ಕೆ ಹೈಕೋರ್ಟ್ ಪೀಠ ಸ್ಥಾಪನೆ ಸ್ವಾಗತಾರ್ಹವಾಗಿದ್ದು, ಇದರಿಂದಾಗಿ ನ್ಯಾಯವು ಈ ಭಾಗದ ಜನರ ಮನೆ ಬಾಗಿಲಿಗೆ ಬಂದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟಿಲ ಹೇಳಿದರು.
ಅವರು ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರವು ಧಾರವಾಡ ಮತ್ತು ಗುಲ್ಬರ್ಗಾದಲ್ಲಿದ್ದ ವಿಭಾಗೀಯ ಪೀಠವನ್ನು ಕಾಯಂ ಪೀಠವನ್ನಾಗಿಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಬಹುದಿನದ ಹೋರಾಟಕ್ಕೆ ಯಶಸ್ಸು ನೀಡಲಾಗಿದೆ. ಧಾರವಾಡ ಸಂಚಾರಿ ಪೀಠವನ್ನು ಸ್ಥಾಪಿಸಲು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕೈಗೊಂಡ ದಿಟ್ಟ ನಿಲುವು, ನಂತರ ಧರ್ಮಸಿಂಗ್ ಅವರು ತೆಗೆದುಕೊಂಡ ಸೂಕ್ತ ನಿರ್ಣಯಗಳಿಂದಾಗಿ ಸಂಚಾರಿ ಪೀಠಗಳು ಪ್ರಾರಂಭವಾದವು. ನಂತರ ವೀರಪ್ಪ ಮೊಯ್ಲಿ ಅವರ ವಿಶೇಷ ಆಸಕ್ತಿಯಿಂದಾಗಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ನಾಯಕರ ನಿರಂತರ ಶ್ರಮದಿಂದಾಗಿ ಈಗ ಧಾರವಾಡ ಹಾಗೂ ಗುಲ್ಬರ್ಗಾಕ್ಕೆ ಹೈಕೋರ್ಟ್ ಪೀಠವಾಗಲು ಕಾರಣವಾಯಿತು. ಇದು ನ್ಯಾಯದಾನ ವ್ಯವಸ್ಥೆಯ ಇತಿಹಾಸದಲ್ಲಿ ಬರೆದಿಡುವಂತಹ ಉತ್ತಮ ಬೆಳವಣಿಗೆ. ಸರ್ಕಾರ ಮಟ್ಟದಲ್ಲಾಗುವ ಅನ್ಯಾಯಗಳನ್ನೂ ಸರಿಪಡಿಸುವಿಕೆಯಲ್ಲಿ ಈ ಬೆಳವಣಿಗೆ ದೊಡ್ಡ ಕೊಡುಗೆ ನೀಡಲಿವೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅನಿಲ ಶಿಂಗ್ಟಾಲಕೇರಿ, ಅನೀಲ ಗರಗ, ಉಮರಫಾರೂಕ್ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

