ಇಷ್ಟಾರ್ಥ ಈಡೇರಿಸುವ ಗುರುಸಾರ್ವಭೌಮರು
ಮುಂಡರಗಿ: ಮಂತ್ರಾಲಯದ ರಾಘವೇಂದ್ರ ಶ್ರೀಗಳು ಕಲ್ಪವೃಕ್ಷ ಕಾಮಧೇನು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಗುರುಸಾರ್ವಭೌಮರು. ಸದಾಕಾಲ ಭಕ್ತರಿಗೆ ಆಶೀರ್ವದಿಸುವ ಮಹಾತಪಸ್ವಿಗಳಾಗಿದ್ದಾರೆ ಎಂದು ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು. ಇಲ್ಲಿನ ಇಲ್ಲೂರ ತೋಟದಲ್ಲಿರುವ ನಂಜನಗೂಡು ಮಂತ್ರಾಲಯ ರಾಘವೇಂದ್ರ ಶ್ರೀಗಳ ಮಠದಲ್ಲಿ ರಾಯರ ಆರಾಧನಾ ಮಹೋತ್ಸವದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೆನೆದವರ ಮನದಲ್ಲಿ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ರಾಯರಲ್ಲಿದೆ. ಮಂತ್ರಾಲಯಮಠ ಜಾತ್ಯತೀತ ಹಾಗೂ ಸಮಾನತೆಯ ಭಕ್ತಿ ಕೇಂದ್ರವಾಗಿದೆ. ಅಂತಹ ಮಹಾತ್ಮರ ಚರಿತ್ರೆ ಆಲಿಸಿ ಪಾವನರಾಗಬೇಕು ಎಂದರು. ಉದ್ಘಾಟನೆ ನೆರವೇರಿಸಿದ ನಾರಾಯಣಪ್ಪ ಇಲ್ಲೂರ ಮಾತನಾಡಿ, ಗುರುಗಳ ಆರಾಧನೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಹೇಳಿದರು. ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಎಸ್.ಕೆ. ಹುಬ್ಬಳ್ಳಿಮಠ, ಎಸ್.ಎಸ್. ಪದಕಿ, ಗುರುಚಾರ್ಯ ಗೊಗ್ಗಿ, ಅಶೋಕ ನಂಜನಗೂಡು, ಸುಧೀರ ಪದಕಿ, ಮನೋಹರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಎಸ್.ಎಸ್. ಕುಲಕರ್ಣಿ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ಪ್ರಸಾದ, ಶಾಂತೇಶ ಪೂಜಾರ, ಎಂ.ಡಿ. ಬಾವಿಮನಿ, ಯು.ಬಿ. ಸಜ್ಜನರ, ರಾಘವೇಂದ್ರ ಇನಾಂದಾರ್, ಸತ್ಯನಾಥ ಇನಾಂದಾರ್, ಶಮಂತಕಮಣಿ ಇಲ್ಲೂರ ಇದ್ದರು. ವಾಗ್ದೇವಿ ಯುವ ಭಜನಾ ಮಂಡಳಿ ಅಧ್ಯಕ್ಷೆ ಭಾರ್ಗವಿ ಇನಾಂದಾರ ಸಂಗಡಿಗರಿಂದ ರಾಯರ ಹಾಡುಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

