ಗದಗ

ಸ್ಲಂ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ

Published On :

ಗದಗ:  ನಗರದ ರಾಚೋಟೇಶ್ವರ ನಗರ ಮತ್ತು ಬಾಪೂಜಿನಗರ ಗುಡಿಸಲು ಪ್ರದೇಶಗಳನ್ನು ಸ್ಲಂ ಪ್ರದೇಶಗಳನ್ನಾಗಿ ಘೋಷಣೆ ಮಾಡಲು ಜಿಲ್ಲಾಡಳಿತ  ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣೆ ಸಮಿತಿ ಹಾಗೂ ಶಾಖೆ ಸಮಿತಿಯ ನೇತೃತ್ವದಲ್ಲಿ ಸಾವಿರಾರು ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸ್ಲಂ ಸಮಿತಿಯಿಂದ 2 ವರ್ಷದಿಂದ ಸ್ಲಂ ಘೋಷಣೆಗಾಗಿ ಹೋರಾಟ ನಡೆಸುತ್ತ ಬಂದು, ಘೋಷಣೆಗಾಗಿ ಬೇಕಾಗಿರುವ ದಾಖಲೆಗಳನ್ನು ಕಚೇರಿಗೆ ನೀಡಲಾಗಿದೆ. 22 ಜನವರಿ 2013 ರಿಂದ ಎರಡು ಗುಡಿಸಲು ಪ್ರದೇಶಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತತವಾಗಿ 6 ದಿನಗಳ ಕಾಲ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ 7 ದಿನದ ಒಳಗಾಗಿ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ 8 ತಿಂಗಳಾದರೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸ್ಲಂ ಘೋಷಣೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮಾರ್ಗ ಸೂಚಿಯಂತೆ ತಕ್ಷಣ ಘೋಷಣೆ ಮಾಡಬೇಕಾದ ಅಧಿಕಾರಿಗಳು ವಿಳಂಬ ಮಾಡುತ್ತಿರುವುದಕ್ಕೆ ಸ್ಲಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.    ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಇಮ್ತಿಯಾಜ ಮಾನ್ವಿ, ರವಿಕುಮಾರ ಬೆಳಮಕರ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಇಬ್ರಾಹಿಂ ಮುಲ್ಲಾ, ಮೆಹರುನ್ನಿಸಾ ಢಾಲಾಯತ, ಸುಶೀಲಮ್ಮ ಗೊಂದೇರ, ಪರಶುರಾಮ ಕಲಾಲ, ಅಮೀನಸಾಬ, ಅನೀಲ ಕಾಳೆ, ಹೊನ್ನಪ್ಪ ಸಾಕಿ, ಸಂತೋಷ ಬಣಕಾರ, ಕಾಜೇಸಾಬ ಡಂಬಳ, ಗೈಬುಸಾಬ ಢಾಲಾಯತ, ಶಂಕ್ರಪ್ಪ ಹದ್ದಲಿ, ಬಸಪ್ಪ ಹುಬ್ಬಳಿ ಮುಂತಾದವರು ಹಾಜರಿದ್ದರು.
ಆರೋಗ್ಯ ತಪಾಸಣೆ
ನರಗುಂದ:  ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಶಾಲೆ ನಂ. 1ರಲ್ಲಿ ಬುಧವಾರ ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ
ತಾಲೂಕಿನಲ್ಲಿರುವ 262 ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿರುವ ಔಷಧ ವಿತರಣೆ ಮಾಡಿದರು. ಇದರಲ್ಲಿ 5 ಮಕ್ಕಳನ್ನು ಬಾಲಸಂಜೀವಿನಿ ಯೋಜನೆ ಅಡಿಯಲ್ಲಿ ಹೆಚ್ಚು ಅಪೌಷ್ಟಿಕದಿಂದ ಬಳಲುವ ಮಕ್ಕಳನ್ನು ಧಾರವಾಡ ಎಸ್‌ಡಿಎಂಸಿ, ಬಾಗಲಕೋಟೆಯ ಕುಮಾರೇಶ್ವರ, ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲು ತಿಳಿಸಲಾಗಿದೆ. ಉಳಿದ 257 ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆ ನೀಡಲಾಗಿದೆಯೆಂದು ಡಾ. ಸಂತೋಷ ಹಣಜಿ ಹಾಗೂ ಡಾ. ಸಿ.ಆರ್. ಬಾಗಲಕೋಟಿ ತಿಳಿಸಿದರು.  ಎಂ.ಆರ್. ಕುಲಕರ್ಣಿ, ಎಸ್.ಎಂ. ಮಂಗಳಿ, ಜಿ.ವಿ. ಕಲ್ಲೂರ, ಎಸ್.ಪಿ. ಮಡಿವಾಳರ, ಆರ್.ಪಿ. ಹಳಕಟ್ಟಿ, ಕಮಾಲಬಾಯಿ, ಗಂಗುಬಾಯಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.