ವಚನ ವಾಚನದಿಂದ ಮನಸ್ಸಿನ ಕಲ್ಮಷ ದೂರ: ಕುರಿಣ
ಗದಗ: ವಚನ ವಾಚನದಿಂದ ಮನಸ್ಸು ನಿಷ್ಕಲ್ಮಷವಾಗುತ್ತದೆ ಎಂದು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಹೇಳಿದರು.
ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಕಸಾಪ ಮೇವುಂಡಿ ಗ್ರಾಮ ಘಟಕದಿಂದ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಚನ ಹೇಳುವ ಮನಸ್ಸು ಸದಾ ನಿಷ್ಕಲ್ಮಷವಾಗಿರುತ್ತದೆ. ಅದು ಅವರನ್ನು ಸನ್ಮಾರ್ಗಾದಲ್ಲಿ ನಡೆಸುತ್ತದೆ. ಮಕ್ಕಳಲ್ಲಿ ಶಿಸ್ತು ಪಾಲನೆಗೆ ಪ್ರೇರೆಪಣೆ ಒದಗಿಸುತ್ತದೆ. ವಚನಗಳಲ್ಲಿರುವ ತತ್ವ ಜನರಿಗೆ ಮುದ ನೀಡುತ್ತದೆ. 12ನೇ ಶತಮಾನದ ಕಾಲದಲ್ಲಿ ವಚನಗಳ ಮಹಾಪೂರವೇ ಹರಿದು ಬಂದಿತು. ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ವಚನಗಳು ಮಹತ್ವದ ಪಾತ್ರ ವಹಿಸಿದವು. ವಚನಗಳ ನೀತಿ ಪಾಲನೆಯಿಂದ ಸಮಾಜ ಉತ್ತಮ ಮಾರ್ಗದಲ್ಲಿ ನಡೆಯುತ್ತದೆ ಎಂದರು.
ಗ್ರಾಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಚ್.ಎಂ. ದಲಭಂಜನ್, ಮುಂಡರಗಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿದರು. ಇದೇ ಸಂದರ್ಭ ಶಿವಪ್ಪ ಕುರಿ ಹಾಗೂ ಎಸ್.ಬಿ. ಹಿರೇಮಠರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೇವುಂಡಿ ಕಸಾಪದ ಅಧ್ಯಕ್ಷ ಶಿವಕುಮಾರ ಸಜ್ಜನ, ಕೊಟ್ರೇಶಪ್ಪ ಸಿಂದೋಗಿ, ಮಲ್ಲಣ್ಣ ಸಿಂಗಟಾಲೂರ ಸಾಗೂ ಗ್ರಾಮದ ಯುವ ಶಕ್ತಿ ಸಂಘದ ಸದಸ್ಯರು ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೀರೇಶ ಸಿದ್ನೆಕೊಪ್ಪ ಸ್ವಾಗತಿಸಿದರು. ಶಿವಕುಮಾರ ಬ್ಯಾಳಿ ನಿರೂಪಿಸಿದರು. ಕಾಶಪ್ಪ ಚುಂಗಿನ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

