ಗದಗ

ರಸ್ತೆ ನಿಯಮ ಪಾಲನೆ ಅವಶ್ಯ: ಪುರುಷೋತ್ತಮ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 31
ಸುರಕ್ಷಿತ ಸಂಚಾರಕ್ಕೆ ರಸ್ತೆ ನಿಯಮ ಪಾಲನೆ ಅತಿ ಅವಶ್ಯ ಎಂದು ಗದಗ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಪುರುಷೋತ್ತಮ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಸ್ಥಳೀಯ ನಗರಸಭೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗದಗ-ಬೆಟಗೇರಿ ಇನ್ನರ್‌ವೀಲ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪ್ರೊಜೆಕ್ಟರ್ ಮೂಲಕ ವಿಶೇಷ ಉಪನ್ಯಾಸ ನೀಡಿದರು. ಸುರಕ್ಷಿತ ವಾಹನ ಚಾಲನೆಗೆ ರಸ್ತೆ ನಿಯಮ ಪಾಲಿಸುವಿಕೆ ಅಗತ್ಯ. ಇದರಿಂದಾಗಿ ಅಪಘಾತಗಳು ಅತ್ಯಂತ ಕಡಿಮೆ. 18 ವರ್ಷ ಮೇಲ್ಪಟ್ಟವರು ಯಾವುದೇ ವಾಹನವನ್ನು ರಸ್ತೆಯಲ್ಲಿ ಓಡಿಸುವ ಸಂದರ್ಭದಲ್ಲಿ ಅವರು ಆರ್‌ಟಿಓದಿಂದ ಅಧಿಕೃತವಾಗಿ ಕಲಿಕಾ ಪ್ರಮಾಣ ಪತ್ರ ಪಡೆದಿರಬೇಕು. ರಸ್ತೆ ನಿಯಮಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಒನ್‌ವೇ ಮತ್ತು ನೋ ಪಾರ್ಕಿಂಗ್, ವಾಹನ ಚಾಲನೆ ಮಾಡುವಾಗ ಸಿಗ್ನಲ್ ತೋರಿಸುವುದು ಸೇರಿದಂತೆ ಮುಂತಾದ ಮಾಹಿತಿ ಹೊಂದಿರಬೇಕು. ಯುವಕರು ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಸ್ತೆ ನಿಯಮಗಳನ್ನು ಪಾಲಿಸುವುದರೊಂದಿಗೆ ವಯಸ್ಸಿಗೆ ಅನುಗುಣವಾಗಿ ವಾಹನ ಚಾಲನಾ ಪತ್ರ ಪಡೆದುಕೊಂಡಿರಬೇಕು. ಈ ಬಗ್ಗೆ ಅವರ ಪೋಷಕರು, ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಅವರಿಗೆ ತಿಳಿವಳಿಕೆ ನೀಡಿದ ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಆರ್‌ಟಿಓ ಅಧಿಕಾರಿ ಪುರುಷೋತ್ತಮ ಸಂವಾದ ನಡೆಸಿದರು.  
ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ವರವಿ, ಅತಿಥಿಗಳಾಗಿ ಆಗಮಿಸಿದ್ದ ನಗರಸಭೆಯ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ವೆಂಕಟೇಶ ಕಟ್ಟಿಮನಿ ಮಾತನಾಡಿ, ಆರ್‌ಟಿಓ ಅಧಿಕಾರಿಗಳು ಕಾಲೇಜು ವಿದ್ಯಾರ್ಥಿನಿಯರಿಗೆ ರಸ್ತೆ ನಿಯಮ ಮತ್ತು ವಾಹನ ಚಾಲನಾ ಪತ್ರದ ಬಗ್ಗೆ ವಿವರಣೆ ನೀಡಿದ್ದು ಸಂತೋಷ ಹಾಗೂ ಸ್ವಾಗತಾರ್ಹ ಸಂಗತಿ.
ಇನ್ನರ್‌ವೀಲ್ ಕ್ಲಬ್ ಜನೋಪಯೋಗಿ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯ ಎಂದರು. ಆಶಾ ಹುಕ್ಕೇರಿ, ಪ್ರೊ. ಅನ್ನದಾನಿ ಹಿರೇಮಠ, ಕ್ಲಬ್‌ನ ಖಜಾಂಚಿ ಸುವರ್ಣಾ ವಸ್ತ್ರದ, ಶಾಂತಾ ಮುಂದಿನಮನಿ, ಹೇಮಾ ಪುಂಗಲಿಯಾ, ಪ್ರೊ. ಆನಂದತೀರ್ಥಾಚಾರ್ ಪುರೋಹಿತ, ಪ್ರೊ. ಕೆ.ಎಸ್. ಬಡಿಗೇರ, ಡಾ. ಆರ್.ಎನ್. ತಟಪಟಿ, ಪ್ರೊ. ಆರ್. ಈಶ್ವರಶೆಟ್ಟಿ, ಪ್ರೊ. ಯಶೋದಾ ಹಿರೇಮಠ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಂತಾ ನಿಂಬಣ್ಣವರ ಪ್ರಾರ್ಥಿಸಿದರು. ಕವಿತಾ ದಂಡಿನ ನಿರೂಪಿಸಿದರು. ಕ್ಲಬ್‌ನ ಕಾರ್ಯದರ್ಶಿ ಸುಲೋಚನಾ ಐಹೊಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.