3ಕ್ಕೆ ಕವಿವಿ ಅಂತರ್ ಕಾಲೇಜುಗುಡ್ಡಗಾಡು ಓಟ ಪಂದ್ಯಾವಳಿ
ಗದಗ: ಕನಕದಾಸ ಶಿಕ್ಷಣ ಸಮಿತಿಯ ಕೆಎಸ್ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಸೆ. 3ರಂದು ಕವಿವಿ ಅಂತರ್ ಮಹಾವಿದ್ಯಾಲಯಗಳ ಏಕವಲಯ ಪುರುಷರ ಹಾಗೂ ಮಹಿಳೆಯರ ಗುಡ್ಡಗಾಡು ಓಟದ ಪಂದ್ಯಾವಳಿ ಹಾಗೂ ತಂಡದ ಆಯ್ಕೆ ಸಮಾರಂಭ ಜರುಗಲಿದೆ ಎಂದು ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು.
ಅವರು ಶನಿವಾರ ನಗರದ ಕೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೆ. 2ರಂದು ಕವಿವಿ ವ್ಯಾಪ್ತಿಯ ಸುಮಾರು 75 ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಆಗಮಿಸುವ ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸಂಸ್ಥೆಯ ವಸತಿ ನಿಲಯದಲ್ಲಿ ಕಲ್ಪಿಸಲಾಗಿದೆ. ಪಂದ್ಯಾವಳಿ ಜರುಗಿಸುವ ಕುರಿತು ಈಗಾಗಲೇ ಸರ್ವ ಸಿದ್ಧತೆ ಪೂರ್ಣಗೊಂಡಿದೆ. 115 ಪುರುಷ ಹಾಗೂ 35 ಮಹಿಳಾ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪುರುಷ ಕ್ರೀಡಾಪಟುಗಳು ಮಹಾವಿದ್ಯಾಲಯದ ಆವರಣದಿಂದ ಸಂಭಾಪುರ ಗ್ರಾಮದ ವರೆಗೆ 6 ಕಿ.ಮೀ. ತೆರಳಿ ಮತ್ತೇ ಮಹಾವಿದ್ಯಾಲಯಕ್ಕೆ ಆಗಮಿಸಬೇಕಿದ್ದು, ಒಟ್ಟು 12 ಕಿ.ಮೀ.ಗಳ ಗುರಿ ನೀಡಲಾಗಿದೆ. ಅದೇ ರೀತಿ ಮಹಿಳಾ ಅಭ್ಯರ್ಥಿಗಳಿಗೆ ಇದೇ ರಸ್ತೆಯಲ್ಲಿ 3 ಕಿ.ಮೀ. ತೆರಳಿ ಮರಳಿ ಮಹಾವಿದ್ಯಾಲಯಕ್ಕೆ ಆಗಮಿಸಬೇಕಿದ್ದು, ಒಟ್ಟು 6 ಕಿ.ಮೀ. ಗುರಿಯನ್ನು ನೀಡಲಾಗಿದ್ದು, ಇದರಲ್ಲಿ ವಿಜೇತರದಾವರಲ್ಲಿ 9 ಪುರುಷರು ಹಾಗೂ 6 ಮಹಿಳೆಯರ ಆಯ್ಕೆ ಮಾಡುವ ಮೂಲಕ ಯುನಿವರ್ಸಿಟಿ ಬ್ಲೂ ಆಯ್ಕೆ ಜರುಗಲಿದೆ ಎಂದರು.
ಪ್ರಾಚಾರ್ಯ ಹಾಗೂ ಪಂದ್ಯಾವಳಿಯ ಅಧ್ಯಕ್ಷ ಪ್ರೊ. ಎಂ.ಎನ್. ಕಾಮನಹಳ್ಳಿ ಮಾತನಾಡಿ, ಸೆ. 3ರಂದು ಬೆಳಗ್ಗೆ 6.30ಕ್ಕೆ ಮಹಾವಿದ್ಯಾಲಯದ ಆವರಣದಿಂದ ಪ್ರಾರಂಭವಾಗುವ ಪುರುಷರ ಓಟದ ಸ್ಪರ್ಧೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಚಾಲನೆ ನೀಡಲಿದ್ದು, ಬೆಳಗ್ಗೆ 8.15ಕ್ಕೆ ಪ್ರಾರಂಭಗೊಳ್ಳುವ ಮಹಿಳಾ ಓಟದ ಸ್ಪರ್ಧೆಗಳಿಗೆ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11.15ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವು ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದ್ದು, ಡಾ. ಬಿ.ಎಫ್. ದಂಡಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರೊ. ಎಸ್.ಎನ್. ಜಾಲಿಹಾಳ, ಕಾರ್ಯಾಧ್ಯಕ್ಷ ಪ್ರೊ. ಎಚ್.ಎಂ. ಮುನಿಸೊಣ್ಣೆಗೌಡ, ಡಾ. ಎನ್.ಎಂ. ಅಂಬಲಿಯವರ, ಡಾ. ಎಸ್.ಎನ್. ವೆಂಕಟಾಪುರ, ಡಾ. ಎ.ಕೆ. ಪೂಜಾರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

