ಗ್ರಾಮೀಣ ಕಲೆ ಉಳಿಯಲು ಶ್ರಮ ಅಗತ್ಯ
ಶಿರಹಟ್ಟಿ: ಬದುಕಿಗೆ ಹಾಸು ಹೊಕ್ಕಾಗಿರುವ ಗ್ರಾಮೀಣ ಕಲೆ ಅಳಿದು ಹೋಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಭಕ್ತಿಪೂರ್ವಕವಾದ ಡೊಳ್ಳಿನ ಪದಗಳ ಕಾರ್ಯಕ್ರಮವನ್ನು ನಡೆಸುತ್ತಿರುವುದು ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು. ಪಟ್ಟಣದ ಮ್ಯಾಗೇರಿ ಓಣಿಯ ಕರಿ ಶಿದ್ದೇಶ್ವರ ಕಾರ್ತಿಕೋತ್ಸವ ಅಂಗವಾಗಿ ಭಾನುವಾರ ಸಂಜೆ ಏರ್ಪಡಿಸಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿ ಕಾಲದಲ್ಲಿ ಸಮಾಜದ ಯುವಕರು ಪ್ರಾಚೀನ ಹಾಗೂ ಪರಂಪರೆಯಾಗಿ ಉಳಿದುಕೊಂಡು ಬಂದಿರುವ ಡೊಳ್ಳಿನ ಪದಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯಸುತ್ತಿರುವುದು ಶ್ಲಾಘನೀಯ ಎಂದರು. ಭಾರತೀಯರು ಆಚರಿಸುವ ಪ್ರತಿ ಹಬ್ಬ, ಉತ್ಸವಗಳಿಗೆ ವಿಶೇಷ ಅರ್ಥ, ಹಿನ್ನೆಲೆ ಇದೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಕಾರ್ತಿಕ ಮಾಸದಲ್ಲಿ ಆಚರಿಸಲ್ಪಡುವ ದೀಪೋತ್ಸವ ಜ್ಞಾನ, ಬೆಳಕಿನ ಸಂಕೇತವಾಗಿದೆ ಎಂದು ಅಭಿಪ್ರಾಯಿಸಿದ ಅವರು, ಕಾರ್ತಿಕ ಮಾಸ ಪೂರ್ತಿ ಮನೆ-ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಅಜ್ಞಾನದ ಅಂಧಕಾರವನ್ನು ದೂರಗೊಳಿಸಿ, ಸುಜ್ಞಾನದ ಬೆಳಕು ಹರಿಸಲಿ ಎಂಬುದೇ ದೀಪೋತ್ಸವದ ಸಂಕೇತವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಎಸ್.ಎನ್. ಪಾಟೀಲ ಮಾತನಾಡಿ, ಇಂದಿನ ಯುವಕರು ನಮ್ಮ ನಾಡಿನ ಧರ್ಮ, ಪರಂಪರೆ, ಸಂಸ್ಕೃತಿ, ಇತಿಹಾಸಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಲ್ಲದೆ, ಜಾನಪದ ಕಲೆ, ಗೀತೆ, ಡೊಳ್ಳಿನ ಪದಗಳು ನಮ್ಮ ನೈಜ ಚಿತ್ರಣ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಅಪಾರವಾದ ಸಂಗ್ರಹವನ್ನು ಹೊಂದಿದ್ದು, ಯುವಕರು ನಮ್ಮ ಈ ಪರಂಪರೆಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಹಾಸು ಹೊಕ್ಕಾಗಿ ಬಂದಿರುವ ಈ ಪರಂಪರೆಗಳನ್ನು ಉಳಿಸಿಕೊಂಡು ನಮ್ಮ ಹಿರಿಯರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು. ಜಗದ್ಗುರು ಫಕೀರ ಸಿದ್ಧರಾಮ ಶ್ರೀಗಳು, ಚನ್ನಯ್ಯ ಅಮೋಘಿಮಠ ಶ್ರೀಗಳು, ಹಠಯೋಗಿ ಸಿದ್ದಯ್ಯ ಅಮೋಘಿಮಠ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸೋಮನಗೌಡ ಮರಿಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಎಚ್.ಡಿ. ಮಾಗಡಿ, ಮಂಜುನಾಥ ಕೊಕ್ಕರಗುಂದಿ ಮತ್ತಿತರರು ಮಾತನಾಡಿದರು. ಮಾಜಿ ಪಪಂ ಉಪಾಧ್ಯಕ್ಷ ಯಲ್ಲಪ್ಪಗೌಡ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಉಪಾಧ್ಯಕ್ಷೆ ಮಿನಾಕ್ಷಿ ತಳವಾರ, ಸದಸ್ಯ ಸಂತೋಷ ಕುರಿ, ಗೂಳಪ್ಪ ಕರಿಗಾರ, ಕಾಶವ್ವ ಹುಲಕಡ್ಡಿ, ಸೋಮಣ್ಣ ಬೆಟಗೇರಿ, ಗುಡದಯ್ಯ ಕೊಪ್ಪದ, ಕಮಲವ್ವ ಮರಿಗೌಡ್ರ, ಪಾತೀಮಾ ಬುವಾಜಿ, ಬುಡನಶ್ಯಾ ಮಕಾನದಾರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಮಣ್ಣ ಡಂಬಳ, ವೈ.ಎಸ್. ಪಾಟೀಲ, ಡಿ.ಕೆ. ಹೊನ್ನಪ್ಪನವರ, ತಿಪ್ಪಣ್ಣ ಸಂಶಿ, ಮಹೇಶ ಹಾರೋಗೇರಿ, ಯಲ್ಲಪ್ಪ ಹಾಲಪ್ಪನವರ ಇದ್ದರು. ತಿರಕಪ್ಪ ಗಾಡಿ ಸ್ವಾಗತಿಸಿದರು. ಎಂ.ಕೆ. ಲಮಾಣಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

