ಗದಗ

ಎಚ್‌ಐವಿ ಪೀಡಿತರ ಬಗ್ಗೆ ಕೀಳರಿಮೆ ಬೇಡ

Published On :

ರೋಣ: ಏಡ್ಸ್ ನಿಯಂತ್ರಣಕ್ಕೆ ಔಷಧಿಗಳು ಲಭ್ಯವಿದ್ದು, ಈ ಕಾಯಿಲೆಗೆ ಭಯಪಡಬೇಕಾದ ಅಗತ್ಯವಿಲ್ಲ. ಎಚ್‌ಐವಿ ಸೋಂಕಿತರನ್ನು ಕೀಳರಿಮೆಯಿಂದ ಕಾಣದೇ ಇತರರಂತೆ ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂದು ಎಚ್‌ಐವಿ ಮತ್ತು ಏಡ್ಸ್ ತಾಲೂಕು ಆಪ್ತ ಸಮಾಲೋಚಕಿ ಡಾ. ರೇಷ್ಮಾ ದೇಶಾಯಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ರೋಣ, ಸಹಾಯಕ ಸರ್ಕಾರಿ ಅಭಿಯೋಜಕರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ವಿಶ್ವ ವಿಕಲಚೇತನ ದಿನಾಚರಣೆ ಕುರಿತು ಜರುಗಿದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಡ್ಸ್ ತಾನಾಗಿಯೇ ಬರುವುದಿಲ್ಲ. ಇದು ಸೋಂಕು ಕಾಯಿಲೆ ಅಲ್ಲ. ಹೆಚ್ಚಾಗಿ ಅಪರೀಚಿತ ವ್ಯಕ್ತಿಗಳೊಂದಿಗಿನ ಅಸುರಕ್ಷತೆ ಲೈಂಗಿಕತೆಯಿಂದ, ಸಂಸ್ಕರಿಸದ ಸೂಜಿ, ಬ್ಲೇಡ್ ಬಳಕೆಯಿಂದ ಬರುತ್ತದೆ. ಆದ್ದರಿಂದ ಕಾಯಿಲೆ ಕುರಿತು ತಿಳಿವಳಿಕೆ ಮತ್ತು ಜಾಗೃತಿ ಅತ್ಯಂತ ಮುಖ್ಯ. ಕಾಯಿಲೆಯ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷದೋಪಚಾರ ಮಾಡಲಾಗುತ್ತಿದೆ. ಕಾಯಿಲೆಯ ಕುರಿತು ವೈದ್ಯಕೀಯ ಪರೀಕ್ಷೆ ಮಾಡಿಸಲು ಸಂಕೋಚಪಡಬಾರದು. ಸರ್ಕಾರ ಈಗಾಗಲೇ ಏಡ್ಸ್ ಪೀಡಿತರಿಗೆ ಅನೇಕ ಸೌಲಭ್ಯ ಒದಗಿಸಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ನಾರಾಯಣ ಆರಿ ಮಾತನಾಡಿದರು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಡಿ. ಮಹಾವರಕರ ಉದ್ಘಾಟಿಸಿದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಬಿ.ಎಸ್. ಮೋಕಾಶಿ ಉಪನ್ಯಾಸ ನೀಡಿದರು. ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಣ್ಣ ಆಲೂರ, ಕಾಡದೇವರಮಠ, ವಿ.ಡಿ. ಪವಾಸ್ಕರ, ಜಿ.ಬಿ. ಹನುಮಾಪುರ, ರಾಜೇಂದ್ರ ಉದ್ದಾರ, ಶರಣಪ್ಪ ಸಜ್ಜನರ, ಆರ್.ಎಸ್. ಮಾಲಗಿತ್ತಿ, ಆರ್.ಎಂ. ರಾಯಬಾಗಿ, ಐ.ಎನ್. ಕುರಿ ಮುಂತಾದವರು ಉಪಸ್ಥಿತರಿದ್ದರು. ಎಲ್.ಎನ್. ಬಾಣದ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.