ಮನಸೆಳೆದ ಕ್ರೀಡಾಪುಟುಗಳು
ಗದಗ: ಬೆಟಗೇರಿಯ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ ರಾಜ್ಯಮಟ್ಟದ ಪಿಯು ಕಾಲೇಜುಗಳ ಹ್ಯಾಂಡ್ಬಾಲ್ ಪಂದ್ಯಾವಳಿ ವೀಕ್ಷಕರಲ್ಲಿ ರೋಚಕತೆ ಮೂಡಿಸಿದವು. 300ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದು, ಈ ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಗೆದ್ದ ತಂಡಗಳು ಮುಂದಿನ ಕ್ವಾರ್ಟರ್, ಸೆಮಿ ಹಾಗೂ ಫೈನಲ್ ಪಂದ್ಯಕ್ಕೆ ಸಿದ್ಧತೆ ನಡೆಸಿದವು. ಬಾಲಕರ ವಿಭಾಗದಲ್ಲಿ ಆರಂಭಿಕ ಹಂತದಲ್ಲಿ ಗದಗ ವಿರುದ್ಧ ಮಂಡ್ಯ ತಂಡ, ಉಡುಪಿ ವಿರುದ್ಧ ಧಾರವಾಡ, ದಕ್ಷಿಣ ಕನ್ನಡ ವಿರುದ್ಧ ಚಿತ್ರದುರ್ಗ, ಕೋಲಾರ ವಿರುದ್ಧ ಬೆಳಗಾವಿ, ಬಳ್ಳಾರಿ ವಿರುದ್ಧ ಮೈಸೂರು, ಕೊಪ್ಪಳ ವಿರುದ್ಧ ಕೊಡಗು ತಂಡಗಳು ವಿಜಯಶಾಲಿಯಾದವು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸುತ್ತಿನಲ್ಲಿ ಶಿವಮೊಗ್ಗ ವಿರುದ್ಧ ಬಿಜಾಪುರ, ರಾಮನಗರ ವಿರುದ್ಧ ಉಡುಪಿ, ಚಿತ್ರದುರ್ಗ ವಿರುದ್ಧ ಹಾವೇರಿ, ಬೆಂಗಳೂರು ಗ್ರಾಮಾಂತರ ವಿರುದ್ಧ ಕೊಡಗು, ಕೊಪ್ಪಳ ವಿರುದ್ಧ ಧಾರವಾಡ, ಬೆಳಗಾವಿ ವಿರುದ್ಧ ಬಿಜಾಪುರ, ದಾವಣಗೆರೆ ವಿರುದ್ಧ ಹಾಸನ ತಂಡಗಳು ವಿಜಯಶಾಲಿಯಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

