ಗದಗ

ಇಂದು ಸಂಸ್ಥಾಪನಾದಿನಾಚರಣೆ

Published On :

ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಎಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದ 10ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಡಿ. 6ರ ಶುಕ್ರವಾರ ಬೆಳಗ್ಗೆ 9ಕ್ಕೆ ಪ್ರಾರಂಭವಾಗುವುದು ಎಂದು ಪ್ರಾಚಾರ್ಯ ಡಾ. ಅಶೋಕ ಚಾಪಗಾಂವ್ ತಿಳಿಸಿದ್ದಾರೆ. ಸಂಸ್ಥಾಪನಾ ದಿನದ ಸಾನ್ನಿಧ್ಯವನ್ನು ಮುಂಬೈನ ರಾಮಕೃಷ್ಣಾಶ್ರಮದ ಸರ್ವಲೋಕಾನಂದಜೀ ವಹಿಸುವರು.  ಮುಂಬಯಿಯ ಡಿ.ವಿ.ಸಿ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಅಧಿಕಾರಿ ಮುದಿತ್ ಜೈನ್ ಆಗಮಿಸುವರು. ಅಗಡಿ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಹರ್ಷವರ್ಧನ ಅಗಡಿ, ಕಮಲಾ ಅಗಡಿ ಮುಂತಾದವರು ಆಗಮಿಸುವರು.
ಇಂದು ಸಮಾವೇಶ
ಗದಗ: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಕರ್ನಾಟಕ, ಜಿಲ್ಲಾ ಸಂಘಟನೆಯು ಡಿ. 6ರಂದು 2.30ಕ್ಕೆ ಗದುಗಿನ ಝಾಕೀರ್ ಹುಸೇನ ಕಾಲೋನಿಯ ಶಾದಿ ಮಹಲ್‌ದಲ್ಲಿ ಜಿಲ್ಲಾ ಸಮಾವೇಶವನ್ನು ಏರ್ಪಡಿಸಿದೆ. ರಾಜ್ಯದಾದ್ಯಂತ ನಡೆಯುತ್ತಿರುವ ಇಂತಹ ಸಮ್ಮೇಳನ ಇದೀಗ ಗದುಗಿನಲ್ಲಿ ಏರ್ಪಡಿಸಿದ್ದು ಘನತೆ ನನ್ನ ಹಕ್ಕು-ನನ್ನ ಹೊಣೆಗಾರಿಕೆ ಶಿರೋನಾಮೆಯಡಿ ಸಂಘಟಿಸಲಾಗಿರುವ ಈ ಸಮಾವೇಶದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವದು ಸಮಾವೇಶದ ಉದ್ದೇಶವಾಗಿದೆ.  ಗದಗ ಕೆಎಲ್‌ಇ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೊ. ಬಿ.ಎನ್.ತಾರಾ ಹಾಗೂ ಲಕ್ಕುಂಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿ ಶಾರದಾ ಬಾಣದ ಆಗಮಿಸುವರು. ಅಧ್ಯಕ್ಷತೆಯನ್ನು ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್‌ದ ಸಲಹಾ ಸಮಿತಿಯ ಸದಸ್ಯೆ ತಯ್ಯಬಾ ಕೌಸರ್ ವಹಿಸುವರು ಎಂದು ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಅಧ್ಯಕ್ಷ ಕೆ.ಐ. ಶೇಖ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.