ಕುಸುಬೆಗೆ ಹೇನು, ಕೊರಕ ಹುಳುವಿನ ಕಾಟ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 5
ಬಿಳಿ ಕುಸುಬೆ ಬೆಳೆಗೆ ಹೇನು ಹಾಗೂ ಎಲೆ ತಿನ್ನುವ ತೊಂಡಿಲು ಕೊರಕ ಹುಳುವಿನ ಕಾಟ ಹೆಚ್ಚಾಗಿದ್ದು, ಇದರಿಂದಾಗಿ ನರೇಗಲ್ಲ ಹೋಬಳಿ ಭಾಗದಲ್ಲಿ ಕುಸುಬೆ ಬಿತ್ತನೆ ಮಾಡಿದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಬೆಳೆಗೆ ಪ್ರಥಮ ಹಂತದಿಂದಲೇ ಪೆಡಂಭೂತವಾಗಿ ಹೇನು ಕಾಡುತ್ತಿದೆ. ಇದರಿಂದಾಗಿಯೇ ಅದೇಷ್ಟೋ ರೈತರು ರೋಷಿ ಹೋಗಿ ಕುಸುಬೆ ಬೆಳೆಯುವದನ್ನು ಕಡಿಮೆ ಮಾಡಿದ್ದಾರೆ.
ಬೆಳೆಗೆ ಆವರಿಸುವ ಹೇನುಗಳು ಕಾಂಡವನ್ನು ಮೆತ್ತಿಕೊಂಡು ಕುಸುಬೆ ಬೆಳೆಗೆ ಬೇಕಾದ ಅವಶ್ಯವಾದ ರಸವನ್ನು ಸಂಪೂರ್ಣ ಹೀರುತ್ತಿವೆ. ಹೀಗಾಗಿ ಬೆಳೆಗೆ ಉಪಯುಕ್ತವಾಗಿರುವ ಕಾಂಡದ ರಸವನ್ನು ಹೇನು ಕೀಟ ಹೀರುವುದರಿಂದ ಎಲೆಗಳು ಬಾಡಿದಂತಾಗಿ ಮುದುರಿಕೊಳ್ಳುತ್ತಿವೆ. ಇದರಿಂದ ಕುಸುಬೆ ಬೆಳೆಯು ಪ್ರಥಮ ಹಂತದಲ್ಲೇ ಸಸಿಗಳು ಸತ್ತು ಹೋಗುತ್ತಿರುವುದರಿಂದ ಕುಸುಬೆ ಬೆಳೆಯು ರೈತರಲ್ಲಿ ಆತಂಕ ಹೆಚ್ಚಿಸಿದೆ.
ಕುಸುಬೆಯ ಒಂದು ಗಿಡದಲ್ಲಿ ನೂರಾರು ಕಪ್ಪು ಬಣ್ಣದ ಹೇನುಗಳು ಆವರಿಸಿವೆ. ಹಸಿರು ಸಸಿಯಾಗಿ ಕಾಣುವ ಬದಲು ಹೇನಿನ ಕಾಟದಿಂದ ಕಪ್ಪು ಬಣ್ಣವಾಗಿ ಮಾರ್ಪಾಡಾಗಿವೆ. ಇದರಿಂದ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬೂಸ್ಟ್ ಬೆಳೆಯಲಾರಂಭಿಸಿದೆ. ಈ ಕೀಟ ಬಾಧೆ ವಿಪರೀತವಾಗಿರುವುದರಿಂದ ಕುಸುಬೆಯ ಗಿಡಗಳು ನೆತ್ತಿಯಿಂದ ಒಣಗಲು ಪ್ರಾರಂಭವಾಗಿ ಬುಡವನ್ನು ತಲುಪುತ್ತಿರುವುದರಿಂದ ಸಂಪೂರ್ಣ ಒಣಗುತ್ತಿರುವ ಕುಸುಬೆಯ ಬೆಳೆಯನ್ನು ಕಂಡು ರೈತರಿಗೆ ದಿಕ್ಕೇ ತೋಚದಂತಾಗಿದೆ.
- ನಿಂಗರಾಜ ಬೇವಿನಕಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

