ತರಾತುರಿಯ ಜ್ಯೇಷ್ಠತಾ ಪಟ್ಟಿ: ಸಂಶಯ
ಕನ್ನಡಪ್ರಭ ವಾರ್ತೆ, ಗದಗ, ಡಿ. 5
ಪ್ರಾಥಮಿಕ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇಂಗ್ಲಿಷ್ ವಿಷಯದಲ್ಲಿ ಪದವೀಧರರಾಗಿರುವ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡುವ ನಿಟ್ಟಿನಲ್ಲಿ ಜಿಲ್ಲಾ ಡಿಡಿಪಿಐ ಕಚೇರಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಈ ಕುರಿತು ಹಲವಾರು ವರ್ಷಗಳಿಂದ ಅನ್ಯಾಯಕ್ಕೊಳಗಾದ ಶಿಕ್ಷಕರು ಕೆಎಟಿ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಡಿಡಿಪಿಐ ಮಾತ್ರ ತರಾತುರಿಯಲ್ಲಿ ಜೇಷ್ಠತಾ ಪಟ್ಟಿ ಸಿದ್ಧ ಪಡಿಸುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಏನಿದು ಗೊಂದಲ?: ಬಿಇಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಬಡ್ತಿ ನೀಡುವ ಸಂದರ್ಭದಲ್ಲಿ 50ಃ50 ಅನುಪಾತ ನೀಡುವುದು ಕಡ್ಡಾಯ. ಆದರೆ, ಗದಗ ಜಿಲ್ಲೆಯಲ್ಲಿ 2003-04ರಿಂದ 2013ರ ವರೆಗೆ 42 ಆಂಗ್ಲಭಾಷೆಯ ಹುದ್ದೆಗಳನ್ನು ನೇರ ನೇಮಕಾತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೇವಲ 18 ಹುದ್ದೆಗಳಿಗೆ ಭಡ್ತಿ ಅವಕಾಶ ನೀಡಲಾಗಿದೆ. ನೇರ ನೇಮಕಾತಿ ಹಾಗೂ ಭಡ್ತಿಯ ನಡುವಿನ ಅನುಪಾತವನ್ನು ಸರಿಪಡಿಸಬೇಕಾದಲ್ಲಿ ಇನ್ನು 24 ಹುದ್ದೆಗಳಿಗೆ ಭಡ್ತಿ ನೀಡಬೇಕು. ಆದರೆ ಜಿಲ್ಲೆಯಲ್ಲಿ ಅದು ನಡೆಯುತ್ತಿಲ್ಲ.
ಕೆಎಟಿಯಲ್ಲಿ ಪ್ರಕರಣ: ಜಿಲ್ಲೆಯ ಕೆಲ ಶಿಕ್ಷಕರು ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರು. ಈ ಮನವಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಜುಲೈ 10, 2012ರಂದು ಗದಗ ಡಿಡಿಪಿಐ ಕಚೇರಿಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದರು. ಆದರೂ ಅದನ್ನು ಪಾಲಿಸದೆ ಅರ್ಹರಿಗೆ ಅನ್ಯಾಯ ಮಾಡುತ್ತಿರುವುದನ್ನು ಗಮನಿಸಿ 29 ಶಿಕ್ಷಕರು ನ್ಯಾಯಕ್ಕಾಗಿ ಕೆಎಟಿ (ಓಛ್ಠಟಿಛಡಿಛ್ಞಛ ಆಜಟ್ಝಟ್ಝಿಡಡ್ಠಿಛಡ್ಝಿಢಜ ಖ್ಠ್ಝಿಛ್ಡಿಟಿಛಟ)ಯಲ್ಲಿ ಪ್ರಕರಣ ದಾಖಲಿಸಿದ್ದು, (ಪ್ರಕರಣ ಸಂಖ್ಯೆ 725-753/213) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 10ರಂದು ವಿಚಾರಣೆ ನಡೆಯಲಿದೆ.
ಮನವಿಗೂ ಬೆಲೆ ಇಲ್ಲ: ಡಿ. 6ರಂದು ಬಡ್ತಿ ನೀಡುವ ಕುರಿತು ಅಂತಿಮಗೊಳಿಸಲು ಡಿಡಿಪಿಐ ಜಿಲ್ಲೆಯ ಎಲ್ಲ ಬಿಇಒಗಳಿಗೆ ಸೂಚನೆ ನೀಡಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ. ಇದನ್ನು ಗಮನಿಸಿದ 29 ಶಿಕ್ಷಕರು ಡಿ. 3, 2013ರಂದು ಡಿಡಿಪಿಐಗೆ ಮನವಿ ಮಾಡಿ, ಈ ವಿಷಯವಾಗಿ ಪ್ರಕರಣ ನಡೆಯುತ್ತಿದೆ. ಡಿ. 10ರಂದು ಹಿಯರಿಂಗ್ ಇದೆ. ಅಂದೇ ತೀರ್ಪು ಬಂದರೂ ಬರಬಹುದು. ಅದಕ್ಕಾಗಿ ಆ ತೀರ್ಪು ಬರುವರರೆಗೂ ಬಡ್ತಿ ಪ್ರಕ್ರಿಯೆಯನ್ನು ಮುಂದೂಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಡಿಡಿಪಿಐ ಕಚೇರಿ ಸಿಬ್ಬಂದಿ ಕ್ಯಾರೆ ಎನ್ನದೇ ಬಡ್ತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಎಲ್ಲರೂ ಶಿಕ್ಷಕರೆ, ಆದರೆ ಡಿಡಿಪಿಐ ಕಚೇರಿ ಸಿಬ್ಬಂದಿಗೆ ಅದೇಕೆ ಈ ಶಿಕ್ಷಕರ ಮೇಲೆ ಆಕ್ರೋಶವಿದೆಯೋ ಗೊತ್ತಿಲ್ಲ. ಆದರೆ ಅವರಿಗೆ ಪರೋಕ್ಷವಾಗಿ ಅನ್ಯಾಯ ಮಾಡುತ್ತಿರುವುದಂತೂ ಸತ್ಯ.
ಸ್ವತಃ ಮಾಡಿದ ಆದೇಶ ಉಲ್ಲಂಘನೆ
ಬಡ್ತಿ ವಿಷಯವಾಗಿ ಅನ್ಯಾಯಕ್ಕೊಳಗಾದ ಶಿಕ್ಷಕರು ಅಕ್ಟೋಬರ್ 7, 2013ರಂದು ಶಿಕ್ಷಣ ಅದಾಲತ್ ನಡೆಯುವ ವೇಳೆಯಲ್ಲಿ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ನಡೆಸಿದ ಅಂದಿನ ಡಿಡಿಪಿಐ ಉಲ್ಲೇಖಗಳನ್ವಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಇಂಗ್ಲಿಷ್ ವಿಷಯದಲ್ಲಿ ಪ್ರೌಢಶಾಲಾ ಶಿಕ್ಷಕರು ಗ್ರೇಡ್-2 ಹುದ್ದೆಗೆ ಭಡ್ತಿ ನೀಡುವ ಕುರಿತಂತೆ ಕೆಎಟಿಯಲ್ಲಿ ಅರ್ಜಿ ದಾಖಲಿಸಿದ್ದಾರೆ. ಸದರ ದಾವೆಯ ತೀರ್ಪು ಬರುವರೆಗೆ ಇಂಗ್ಲಿಷ್ ವಿಷಯದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2 ಹುದ್ದೆಗೆ ಬಡ್ತಿ ನೀಡಲು ಬರುವುದಿಲ್ಲ ಎಂದು ಆದೇಶ ಸಂಖ್ಯೆ 2 ಸಿಆರ್-3316/17, ಪ್ರೌಶಾಶಿ/2013-14 ಯಲ್ಲಿ ತಿಳಿಸಿದ್ದಾರೆ. ಆದರೀಗ, ಇದ್ಯಾವುದನ್ನು ಗಮನಿಸದೆ ಏಕಪಕ್ಷೀಯವಾಗಿ ಬಡ್ತಿ ನೀಡುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

