ಗದಗ

ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಬೇಡ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 6
ಮೂಢನಂಬಿಕೆಗಳು ನಮ್ಮನ್ನು ಅಂಧರನ್ನಾಗಿ ಮಾಡುತ್ತಿರುವುದು ಒಂದೆಡೆಯಾದರೆ, ಪಾಶ್ಚಾತ್ಯ ಸಂಸ್ಕೃತಿ ನಮ್ಮ ನಾಡಿನ ಅಭಿಮಾನಕ್ಕೆ ಧಕ್ಕೆ ತಂದಿದೆ. ಇದರಿಂದ ಎಚ್ಚೆತ್ತುಕೊಂಡು ನಾವೆಲ್ಲ ಭಾರತೀಯ ಸಂಸ್ಕೃತಿ ಅನುಸರಿಸಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಆಶ್ರಯದಲ್ಲಿ ಜರುಗಿದ ಬೀರೇಶ್ವರ ಕಾರ್ತಿಕೋತ್ಸವ, ಡೊಳ್ಳಿನ ಪದಗಳ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿಗೆ ಸಂಸ್ಕೃತಿಯನ್ನು ಪರಿಚಯಿಸಿದ ಭಾರತ ಮಾನವ ಜನಾಂಗದ ತೊಟ್ಟಿಲು. ನಮ್ಮ ದೇಶ ಸಾಧು, ಸಂತರ ಬೀಡು, ಆಧ್ಯಾತ್ಮಿಕ ಸಂಪತ್ತು, ರಾಜ ಮಹಾರಾಜರು ಆಳಿದ, ಕವಿ ಸಂಗೀತಗಾರರು, ಕಲಾವಿದರು, ವಿಜ್ಞಾನಿ-ತಂತ್ರಜ್ಞಾನಿಗಳ ನಾಡು. ಹೀಗೆಲ್ಲ ವೈಶಿಷ್ಟ ಹೊಂದಿದ ಭಾರತ ನಮಗೆ ಅಭಿಮಾನದ ದ್ಯೋತಕ ಎಂದರು.
ಪಟ್ಟಣದಲ್ಲಿ ಡೊಳ್ಳಿನ ಪದಗಳ ಸ್ಪರ್ಧೆ ಏರ್ಪಡಿಸಿದ್ದು ಸಂತಸದ ಸಂಗತಿ. ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಜನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಿಮ್ಮ ಸಂಸ್ಕೃತಿ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಇಂದಿನ ದಿನಮಾನದಲ್ಲಿ ಪ್ರತಿಯೊಂದು ಕಲೆ ವ್ಯಾಪಾರೀಕರಣಗೊಳ್ಳುತ್ತಿದೆ. ಇದರಿಂದಾಗಿ ಧಾರ್ಮಿಕ ಮನೋಭಾವ ಕ್ಷೀಣಿಸುತ್ತಿದೆ. ಡೊಳ್ಳಿನ ಪದಗಳ ಸ್ಪರ್ಧೆ ಏರ್ಪಡಿಸಿ ಸಮಾಜದಲ್ಲಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಲು ಶ್ರಮಿಸಬೇಕು ಎಂದರು. ನ್ಯಾಯವಾದಿ ಸಾವಿತ್ರಿ ಮುಜಮದಾರ ಮಾತನಾಡಿ, ಮಹಿಳೆಯರು ಭಾರತೀಯ ಸಂಸ್ಕೃತಿ, ಸಭ್ಯತೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಹಿಂದೆ ಭಾರತದಲ್ಲಿ ಮಹಿಳೆಯರಿಗೆ ಅಪಾರ ಗೌರವವಿತ್ತು. ಪ್ರತಿಯೊಬ್ಬ ಪುರುಷರೂ ಪರಸ್ತ್ರೀಯರ ಬಗ್ಗೆ ಪೂಜ್ಯ ಭಾವನೆ, ಭಯ ಹೊಂದಿದ್ದರು. ಆದರೆ ಇಂದು ನಮ್ಮ ದೇಶಕ್ಕೆ ಪ್ರವೇಶಿಸಿರುವ ಪಾಶ್ಚಾತ್ಯ ಸಂಸ್ಕೃತಿಯಿಂದ ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶಿವಣ್ಣ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಯ್ಯ ಷಣ್ಮುಖಯ್ಯ ಅಮೋಘೀಮಠ ಶ್ರೀಗಳು ಸಾನ್ನಿಧ್ಯವಹಿಸಿದ್ದರು.
ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಘಂಟಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ಡಾ. ರಾಮು ಮೂಲಗಿ, ಪಪಂ ಸದಸ್ಯ ಎಚ್.ಡಿ. ಮಾಗಡಿ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಮಣ್ಣ ಡಂಬಳ, ವೈ.ಎಸ್. ಪಾಟೀಲ, ಎನ್.ವೈ. ಕರಿಗಾರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ದೇವಪ್ಪ ಬಟ್ಟೂರ, ಫಕೀರಪ್ಪ ಪೂಜಾರ, ಬೀರಪ್ಪ ಸ್ವಾಮಿ, ವಸಂತ ಜಗ್ಗಲರ, ನೀಲಪ್ಪ ಶರಸೂರಿ, ಪಪಂ ಸದಸ್ಯ ಗೂಳಪ್ಪ ಕರಿಗಾರ, ಕಾಶವ್ವ ಹುಲಕಡ್ಡಿ, ದೇವು ಲಮಾಣಿ ಮತ್ತಿತರರು ಇದ್ದರು.
ಕರಿಯಪ್ಪ ಕುಳಗೇರಿ ಸ್ವಾಗತಿಸಿದರು. ಮಹೇಶ ಹಾರೋಗೇರಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.