ಗದಗ

ಆಲೂರು ವೆಂಕಟರಾಯರ ಕೊಡುಗೆ ಅಪಾರ

Published On :

ಗದಗ: ಕರ್ನಾಟಕ ಏಕೀಕರಣ ಪ್ರಕ್ರಿಯೆ ತೀವ್ರಗೊಳ್ಳಲು ಆಲೂರು ವೆಂಕಟರಾಯರ ಹೋರಾಟ ಮತ್ತು ಕೊಡುಗೆ ಅಗ್ರಗಣ್ಯವಾಗಿದೆ ಎಂದು ಕೆ.ಕೆ.ಎಸ್ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅರವಿಂದ ಪೂಜಾರ ಹೇಳಿದರು.
ಅವರು ಈಚೆಗೆ ನಗರದ ಜಿಲ್ಲಾ ಕಸಾಪ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕ ಏಕೀಕರಣ ಚಳವಳಿ ಅವರನ್ನು ಪೂರ್ಣ ಆವರಿಸಿ ರಾಜ್ಯೋದಯದ ಶುಭ ಗಳಿಗೆಯ ರೂವಾರಿಗಳಲ್ಲಿ ಇವರು ಹೆಸರು ಪಡೆಯುವಂತಾಯಿತು. ಕನ್ನಡ ಸಂಸ್ಕೃತಿ, ಕರ್ನಾಟಕತ್ವ ಕುರಿತು ಆಲೂರು ವೆಂಕಟರಾಯರ ವಿಚಾರಗಳು ಇಂದು ಮಾರ್ಗದರ್ಶಿಯಾಗಿದೆ. ಆಲೂರರು ಸಾಹಿತ್ಯ ರಚನೆ ಜತೆಗೆ ಪತ್ರಿಕಾ ಮಾಧ್ಯಮದೊಂದಿಗೆ ಜನರಲ್ಲಿ ಏಕೀಕರಣ ಭಾವನೆ ಬಿತ್ತಿದರು. ಕರ್ನಾಟಕ ಗತವೈಭವ ಒಳಗೊಂಡಂತೆ 35 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 28 ಕೃತಿಗಳು ಲಭ್ಯವಿದ್ದು, 5 ಕೃತಿಗಳು ಲಭ್ಯವಿರುವುದಿಲ್ಲ. ಆಲೂರರು ತಮ್ಮ ಬರಹ ಮತ್ತು ಬದುಕಿನಲ್ಲಿ ರಾಷ್ಟ್ರೀಯತೆ, ಕರ್ನಾಟಕ ಏಕೀಕರಣ ಕನಸನ್ನು ಕಂಡವರು ಎಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೊಗೇರಿ ಮಾತನಾಡಿ, ನಾಡಿನ ಹಲವಾರು ಹೋರಾಟಗಾರರ ಫಲವಾಗಿ ಇಂದು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಕರ್ನಾಟಕವನ್ನು ಏಕೀಕರಣಗೊಳಿಸಿಕೊಂಡಿದ್ದೇವೆ. ದೇಶಭಕ್ತಿ, ಕರ್ನಾಟಕತ್ವ, ಕನ್ನಡ ಸಂಸ್ಕೃತಿ, ಹಿರಿಯರು ಹೋರಾಟ, ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಲಿ. ಆಲೂರು ವೆಂಕಟರಾಯರ ಪುತ್ಥಳಿ ಅನಾವರಣಗೊಂಡು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲುವಂತಾಗಲಿ ಎಂದರು. ಕಿಶೋರಬಾಬು ನಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ವಾಸುದೇವ ಹೂಲಿ, ಅ.ದ.ಕಟ್ಟಿಮನಿ, ಶೋಭಾ ಶಲವಡಿ, ರೇಖಾ ಟಿಕಾರೆ, ಭಾಗ್ಯಶ್ರೀ ಘಳಗಿ, ಜಯಶ್ರೀ ಅಂಗಡಿ, ಚನ್ನಬಸಮ್ಮ ವಾರಿ, ವಿನೋದ ಆರಿ, ಧರ್ಮೇಂದ್ರ ಇಟಗಿ, ರಾಜಶೇಖರಯ್ಯ ಕಾಲವಾಡಮಠ, ಎಚ್.ಟಿ.ಸಂಜೀವಸ್ವಾಮಿ, ಡಾ. ರಾಜೇಂದ್ರ ಗಡಾದ, ವಿ.ಬಿ.ಪಠಾಣಿ, ವಿ.ಆರ್. ಹುಯಿಲಗೋಳ, ಎಸ್.ಎಫ್. ಹಡಪದ, ಕೆ.ಎಚ್. ಬೇಲೂರ, ಬಿ.ಎಸ್. ಹಿಂಡಿ ವಿ.ಎನ್. ಬೇಂದ್ರೆ ಮುಂತಾದವರು ಉಪಸ್ಥಿತರಿದ್ದರು. ವಾಸು ಟಿಕಾನದಾರ ಪ್ರಾರ್ಥಿಸಿದರು. ಎಸ್.ಬಿ. ಗಾಣಿಗೇರ ಸ್ವಾಗತಿಸಿದರು. ಡಾ. ಸಂಗಮೇಶ ತಮ್ಮನಗೌಡರ ನಿರೂಪಿಸಿದರು. ಜಿ.ಎಸ್.ಯತ್ನಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.