ಇಂದು ಪಗಡೆ ಸ್ಪರ್ಧೆ
ಗದಗ: ಬೆಟಗೇರಿ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿಯ ಕಾರ್ತಿಕೋತ್ಸವದ ಅಂಗವಾಗಿ ಡಿ. 9ರಂದು ರಾತ್ರಿ 8.30ಕ್ಕೆ ರಾಜ್ಯಮಟ್ಟದ ಪಗಡೆ ಸ್ಪರ್ಧೆ ಏರ್ಪಡಿಸಲಾಗಿದೆ. ಈರಪ್ಪ ಜಂಗಣ್ಣವರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಗರಸಭೆ ಸದಸ್ಯೆ ಮಂಜುಳಾ ರಾನಡೆ, ಮಂಜುನಾಥ ಕಟ್ಟಿಮನಿ, ವಿಶಾಲ ಸಿದ್ಲಿಂಗ್, ಅರುಣಕುಮಾರ ಹೊಸಮನಿ, ಮಲ್ಲೇಶಪ್ಪ ಪಲ್ಲೇದ, ಅನಂತರಾವ್ ಸುಲಾಖೆ, ಮಲ್ಲೇಶಪ್ಪ ಉಪ್ಪಾಸಣ್ಣವರ, ಮಹದೇವಪ್ಪ ಪಲ್ಲೇದ ಆಗಮಿಸುವರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರು. 15 ಸಾವಿರ ನಗದು ಹಾಗೂ ಶೀಲ್ಡ್, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರು. 10 ಸಾವಿರ ನಗದು ಮತ್ತು ಶೀಲ್ಡ್, ತೃತೀಯ ಸ್ಥಾನ ಪಡೆದ ತಂಡಕ್ಕೆ ರು. 5 ಸಾವಿರ ನಗದು ಹಾಗೂ ಒಂದು ಶೀಲ್ಡ್ ಮತ್ತು ಸಮಾಧಾನಕರ ಬಹುಮಾನವಾಗಿ ರು. 2500 ಸಾವಿರ ನಗದು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದವರು ಡಿ. 9ರಂದು ರಾತ್ರಿ 8 ಗಂಟೆಯೊಳಗಾಗಿ ಶೇಖಪ್ಪ ಲಗಳಿ, ಗರಡಿಮನೆ ಹತ್ತಿರ, ಉಸಗಿನಗಟ್ಟಿ ಓಣಿ ಬೆಟಗೇರಿ ತಾ. ಗದಗ ಇವರಲ್ಲಿ ಹೆಸರು ನೋಂದಾಯಿಸಬೇಕು. ಮಂಜುನಾಥ ಸಂಕನಗೌಡ್ರ 9535429681, ಶಂಕ್ರಪ್ಪ ಉಪ್ಪಿನ 9164711207ಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪರಸ್ಥಳದ ಆಟಗಾರರಿಗೆ ಊಟದ ವ್ಯವಸ್ಥೆ ಇರುತ್ತದೆ.
ಚೈತ್ರಾ ಗೌಡರ ಆಯ್ಕೆ
ಗದಗ: ತೋಂಟದಾರ್ಯ ವಿದ್ಯಾಪೀಠದಲ್ಲಿ ಈಚೆಗೆ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜೆಟಿ ಕನ್ನಡ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಚೈತ್ರಾ ಗೌಡರ ಅಭಿನಯ ಗೀತೆ ಹಾಗೂ ಛದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

