ಗದಗ

ನಕಲಿ ಬೀಜ ಪೂರೈಕೆ: ಪರಿಹಾರಕ್ಕೆ ಆಗ್ರಹ

Published On :

ನರಗುಂದ: ಪ್ರಸಕ್ತ ಸಾಲಿನಲ್ಲಿ ಕನಕ ಬಿಟಿ ಹತ್ತಿ ಕಂಪನಿ ಕಳಪೆ ಬೀಜ ವಿತರಣೆ ಮಾಡಿದ್ದು, ಇದನ್ನು ಬಿತ್ತನೆ ಮಾಡಿದ್ದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ನಷ್ಟ ಹೊಂದಿದ ಎಲ್ಲ ರೈತರಿಗೂ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿತು. ಏನೋ ಹಿಂಗಾರಿ ಮಳೆ ಅಲ್ಪ-ಸ್ವಲ್ಪ ಮಟ್ಟಿಗೆ ಆಗಿದ್ದರಿಂದ ರೈತ ತನ್ನ ನೀರಾವರಿ ಜಮೀನಗಳಿಗೆ ಕನಕ ಕಂಪನಿಯ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿ ಮೂರ್ನಾಲ್ಕು ತಿಂಗಳ ಗತಿಸಿದರೂ ಹತ್ತಿ ಬೆಳೆಯಲ್ಲಿ ಹೂವು, ಮಗ್ಗಿ, ಕಾಯಿ, ಇಲ್ಲದೆ ಬೆಳೆಯಷ್ಟೇ ಬೆಳೆದಿದೆ.ಪ್ರತಿ ಎಕರೆ ಬಿತ್ತನೆ ಮಾಡಲು ರು. 25ರಿಂದ 30 ಸಾವಿರ ಖರ್ಚು ಮಾಡಿದ್ದು, ಕೂಡಲೇ ರೈತರಿಗೆ ಅದನ್ನು ಪರಿಹಾರ ರೂಪದಲ್ಲಿ ಕೂಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ನಾಗರಾಜ ಪಾಟೀಲ ಮನವಿ ಸ್ವೀಕರಿಸಿದದರು. ಈ ಸಂದರ್ಭದಲ್ಲಿ ಎಸ್.ಬಿ. ಜೋಗಣ್ಣವರ, ವಿಕಾಸ ಸೊಪ್ಪಿನ, ಎಸ್.ಕೆ. ಗಿರಿಯಣ್ಣವರ, ರವಿ ಮಡಿಯವರ, ವಿ.ಜಿ. ಪವಾರ, ಆರ್.ಬಿ. ರಾಚನಗೌಡ್ರ, ಬುಡನ್ಸಾಬ ಮೇಯಖಾನ, ಆರ್.ಎನ್.ಪಾಟೀಲ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.