ಗದಗ

ನಾಲ್ಕು ರಾಜ್ಯಗಳ ಫಲಿತಾಂಶ: ಭವಿಷ್ಯಕ್ಕೆ ಮುನ್ನಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 8
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ಶಕ್ತಿ ವೃದ್ಧಿಸಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.
ಭಾನುವಾರ ನಗರದ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಇದರಿಂದ ಜನತೆ ರೋಸಿ ಹೋಗಿದ್ದಾರೆ. ಹಲವಾರು ದಮನಕಾರಿ ಪ್ರವೃತ್ತಿಯನ್ನು ಕಾಂಗ್ರೆಸ್ನ ದೆಹಲಿ ನಾಯಕರು ಮಾಡುತ್ತ ಬಂದಿದ್ದು, ಅದರ ಫಲವಾಗಿಯೇ ಇಂದು ಜನತೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿಗೆ ಸ್ಪಷ್ಟವಾದ ಅಧಿಕಾರವನ್ನು ನೀಡಿದ್ದಾರೆ.
ಈ ಚುನಾವಣೆಗಳನ್ನು ಉಪಾಂತ್ಯ ಪಂದ್ಯಗಳೆಂದು ಪರಿಣಿಸಲಾಗಿತ್ತು. ಈ ಪಂದ್ಯಗಳಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಜನರ ಭರವಸೆಯನ್ನು ಗಳಿಸುವ ಮೂಲಕ ತನ್ನ ಸಾರ್ಮಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಜನತೆ ಅಟಲ್ ಜೀ ಅವರ ಹಿಂದಿನ ಹಾಗೂ ಭವಿಷ್ಯದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತ್ನಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಆಧಾರದಲ್ಲಿ ಸ್ಪಷ್ಟ ಬೆಂಬಲವನ್ನು ನೀಡಿದ್ದಾರೆ. ಈ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ನರೇಂದ್ರ ಮೋದಿ ಸ್ಪಷ್ಟ ಬಹುಮತದೊಂದಿಗೆ ದೇಶದ ಪ್ರಧಾನಿಯಾಗಿ, ಜಗತ್ತಿನಲ್ಲಿಯೆ ಭಾರತ ಮುಂದುವರಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಎಂ. ಎಂ. ಹಿರೇಮಠ, ಸಿರಾಜ್ ಬಳ್ಳಾರಿ, ಮೋಹನ ಮಾಳಶೆಟ್ಟಿ, ಅರವಿಂದ ಹುಲ್ಲೂರ, ಪ್ರವೀಣ ಬನ್ಸಾಲಿ, ಶ್ರೀನಿವಾಸ ಬಾಂಡಗೆ, ಈಶಣ್ಣ ಮುನವಳ್ಳಿ, ಸಂಗಮೇಶ ದುಂದೂರ, ವಿನಾಯಕ ಹಬೀಬ, ಸುಧೀರ ಕಾಟಿಗಾರ, ಮಾಧವ ಗಣಾಚಾರಿ, ಛಗನ್ ರಾಜಪುರೋಹಿತ, ಪ್ರಶಾಂತ ನಾಯ್ಕರ, ಸದಾನಂದ ಪಿಳ್ಳಿ, ಪರಶುರಾಮ ಹೆಬಸೂರ, ಕಮಲಾಕ್ಷಿ ಗೊಂದಿ, ವಂದನಾ ವರ್ಣೇಕರ, ಜಯಶ್ರೀ ಉಗಲಾಟದ, ಸರೋಜಾ ಸೀರಿ, ಕಾಂತಿಲಾಲ ಬನ್ಸಾಲಿ ಮುಂತಾದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.