ಗದಗ

ಬಿಜೆಪಿ ಜಯಭೇರಿ: ವಿಜಯೋತ್ಸವ

Published On :

ಮುಂಡರಗಿ: ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ಗಡದಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಭಾನುವಾರ ಬಿಜೆಪಿ ನಾಯಕರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, 5 ರಾಜ್ಯಗಳ ಚುನಾವಣೆಯಲ್ಲಿ ಇಂದು 4 ರಾಜ್ಯಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನುಡಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲಿದೆ ಎಂದರು.
ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಯುವ ಘಟಕದ ಅಧ್ಯಕ್ಷ ದೇವಪ್ಪ ಇಟಗಿ ಮುಂತಾದವರು ಮಾತನಾಡಿದರು.
ದೇವಪ್ಪ ಕಂಬಳಿ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ, ಪುರಸಭ ಸದಸ್ಯ ಸರೇಶ ಮಾಳೆಕೊಪ್ಪ, ಪ್ರಭು ಅಬ್ಬಿಗೇರಿ, ಮೋಹನ್ ದೇಸಾಯಿ, ಶ್ರೀನಿವಾಸ ಅಬ್ಬಿಗೇರಿ, ತಾಪಂ ಸದಸ್ಯ ಸಿದ್ದಲಿಂಗನಗೌಡ ಪಾಟೀಲ, ಬಸಪ್ಪ ಬನ್ನಿಕೊಪ್ಪ, ವಿ.ಎಸ್. ಕಣವಿಮಠ, ಪರಶುರಾಮ ಸುಣಗಾರ, ಶಿವಪ್ಪ ಚಿಕ್ಕಣ್ಣವರ, ಹನುಮಂತ ಸುಣಗಾರ, ಚಂದ್ರಕಾಂತ ಚಿಕ್ಕಣ್ಣವರ, ರುದ್ರಪ್ಪ ಲದ್ದಿ, ಪರಮೇಶ್ವರಪ್ಪ ಗೋಣೆನ್ನವರ, ಶಂಕರಗೌಡ ಪಾಟೀಲ, ಶಂಕರ ಉಳ್ಳಾಗಡ್ಡಿ, ಡೊಣ್ಣಿ ಸೇರಿದಂತೆ ಅನೇಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.