ಸಂಭ್ರಮಾಚರಣೆ
ಗದಗ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಬಿಜೆಪಿ ಮುನ್ನಡೆ ಸಾಗಿಸುತ್ತಿದ್ದಂತೆ ಭಾನುವಾರ ನಗರದ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಜಿಲ್ಲಾ ಶ್ರೀರಾಮ ಸೇನೆ ಘಟಕದ ವತಿಯಿಂದ ಸಂಭ್ರಮ ಆಚರಿಸಲಾಯಿತು. ದೇಶದ ಜನತೆ ಕಾಂಗ್ರೆಸ್ ಆಡಳಿತ ವಿರೋಧಿ ಮತ ಚಲಾಯಿಸುವ ಮೂಲಕ, ಸನಾತನ ಹಿಂದುತ್ವಕ್ಕೆ ಮತ್ತೆ ಮಣೆ ಹಾಕಿದ್ದಾರೆ. ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಜು ಖಾನಪ್ಪನವರ, ಮಹೇಶ ರೋಖಡೆ, ಸುರೇಶ ಹಾದಿಮನಿ, ಹುಲಗಪ್ಪ ವಾಲ್ಮೀಕಿ, ಮಾರುತಿ ದಹಿಂಡೆ, ರಾಜು ಗಡ್ಡಿ, ಅರುಣ ಬಿಂಗಿ, ಕುಮಾರ ನಾಲ್ವಾಡ, ಬಸವರಾಜ ಕುರ್ತಕೋಟಿ, ಈರಣ್ಣ ಅಕ್ಕಸಾಲಿಗರ, ಚೇತನ ಕೊತಬಾಳ ಮುಂತಾದವರು ಹಾಜರಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ರೋಣ: ನರಗುಂದದಲ್ಲಿ ಈಚೆಗೆ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಬಾಲಕರ ಪಂದ್ಯಾವಳಿಯಲ್ಲಿ ಪಟ್ಟಣದ ಕೆ.ವಿ. ಶಾಂತಗೇರಿಮಠ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಸಂತೋಷ ಜಕ್ಕನಗೌಡ್ರ, ವಿಕ್ರಂ ಹಿರೇಮನಿ, ಅಮೀರ ಕೊಪ್ಪಳ, ವೀರೇಶ ಶಿರೂರ ಮತ್ತು ಬಸವರಾಜ ಹೊಸಳ್ಳಿ ಅವರನ್ನು ಹಲವರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

