ಗದಗ

ರಂಗಕಲೆಯಿಂದ ಮನರಂಜನೆ, ಜಾಗೃತಿ

Published On :

ಗದಗ:  ರಂಗಕಲೆ ಮನರಂಜನೆಯೊಂದಿಗೆ ಜ್ಞಾನ ಮತ್ತು ಜಾಗೃತಿ ಮೂಡಿಸುವ ಕಲೆಯಾಗಿದೆ ಎಂದು ಬಿ.ಬಿ. ಬಣ್ಣದ ಜಾನಪದ ಕಲಾ ಮೇಳದ ಅಧ್ಯಕ್ಷ ಅಶೋಕ ಬಣ್ಣದ ಅಭಿಪ್ರಾಯಪಟ್ಟರು. ಅವರು ಈಚೆಗೆ ನಗರದ ಅಡವೀಂದ್ರ ಮಹಾಸ್ವಾಮಿಗಳ ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿ ಹಾಗೂ ನಿಜಗುಣ ಶಿವಯೋಗಿಗಳ ಜಯಂತಿ ಹಾಗೂ ಕಾರ್ತಿಕೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಂಗ ಕಲೆ ಅದರಲ್ಲೂ ದೊಡ್ಡಾಟ, ಸಣ್ಣಾಟಗಳು ಉತ್ತರ ಕರ್ನಾಟಕ ಗಂಡುಮೆಟ್ಟಿನ ಕಲೆಗಳಾಗಿವೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಮಾಜ ಮತ್ತು ಸರ್ಕಾರದಿಂದ ಆಗಬೇಕಿದೆ ಎಂದರು. ವೈರಾಗ್ಯ ಜ್ಞಾನಮೂರ್ತಿ ನಿಜಗುಣ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಿದ ಬಿ.ಕೆ. ಮನ್ವಾಚಾರ್ಯರು ನಿಜಗುಣ ಶಿವಯೋಗಿಗಳು ಮಹಾನ್ ತತ್ವಜ್ಞಾನಿಯಾಗಿದ್ದರು ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕುಂಚಬ್ರಹ್ಮ ಡಿ.ವಿ. ಹಾಲಬಾವಿ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಪ್ರತಾಪ ಬಹುರೂಪಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಿ.ಬಿ. ಬಣ್ಣದ ಜಾನಪದ ಕಲಾ ತಂಡದ ಕಲಾವಿದರು ದೊಡ್ಡಾಟದ ಕೆಲವು ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು. ಸಾನ್ನಿಧ್ಯವನ್ನು ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಬಿ.ಬಿ. ಹೂಗಾರ ವಹಿಸಿದ್ದರು. ವಿಜಯಲಕ್ಷ್ಮೀ ಬಣ್ಣದ ಹಾಗೂ ಬಿ.ಬಿ. ಕೋನ್ನವರ ಉಪಸ್ಥಿತರಿದ್ದರು. ಕಾಶೀ ಪಾಠ ಶಾಲೆಯ ವಟುಗಳಿಂದ ವೇದಘೋಷ ನಡೆಯಿತು. ಬೆಟದಯ್ಯ ಹಿರೇಮಠ ಸ್ವಾಗತಿಸಿದರು. ವ್ಹಿ.ಎಂ. ಕುಂದ್ರಾಳ ಹಿರೇಮಠ ನಿರೂಪಿಸಿ ದರು. ಬಿ.ಎಂ. ಬಿಳೆಯಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.