ಸರ್ಕಾರದ ಯೋಜನೆ ಸದುಪಯೋಗವಾಗಲಿ
ನರಗುಂದ: ಸರ್ಕಾರ ಬಡ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಪ್ರತಿಯೊಬ್ಬ ಮಕ್ಕಳು ಸಕಾಲದಲ್ಲಿ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೆವಿಎಸ್ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಚ್. ಲಮಾಣಿ ಹೇಳಿದರು. ಅವರು ಪಟ್ಟಣದ ಮಾರುತಿ ನಗರದ ಎಸ್ಬಿಜಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಉಚಿತ ಸೈಕಲ್ ವಿತರಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಪುಂಡಲಿಕಪ್ಪ ಹುಲಜೋಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಹನುಮಂತಪ್ಪ ಮಾದರ, ಹನುಮಂತ ಶಿಂಧೆ, ಡಿ.ಎಸ್. ಬೂದಿಹಾಳ, ಎಸ್.ಎಸ್. ಹನಸಿ, ಎಸ್.ಬಿ. ಬೈರಕಟ್ಟಿ, ಎನ್.ಜಿ. ಖಂಡೆಪ್ಪಗೌಡ್ರ, ಕೆ.ಎಸ್. ಕಳ್ಳೆಪ್ಪನವರ, ಎಸ್.ಆರ್. ಕುರಿ ಮುಂತಾದವರು ಹಾಜರಿದ್ದರು.
15ರಂದು ಚದುರಂಗ ಸ್ಪರ್ಧೆ
ಗದಗ: ಸಿಲ್ವರ್ಲೈನ್ ಚೆಸ್ ಅಕಾಡೆಮಿಯು ಡಿ. 15ರಂದು ಕಳಸಾಪುರ ರಸ್ತೆಯಲ್ಲಿರುವ ಬ್ರೆಟ್ ಹಾರಿಝೋನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಚದುರಂಗ ಸ್ಪರ್ಧೆ ಆಯೋಜಿಸಿದೆ. ಆಸಕ್ತ ಜಿಲ್ಲೆಯ ಚೆಸ್ ಪಟುಗಳು ಹೆಸರು ನೋಂದಾಯಿಸಬಹುದು. 12 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟ 2 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9535027184, 9900284861 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಅಪಘಾತ: ಓರ್ವ ಸಾವು
ಶಿರಹಟ್ಟಿ: ತಾಲೂಕಿನ ವಡವಿ-ಹೊಸೂರ ಮತ್ತು ಕನಕವಾಡ ರಸ್ತೆ ಮಾರ್ಗವಾಗಿ ಟ್ರ್ಯಾಕ್ಟರ್ ಓಡಿಸುವಾಗ ದಿಬ್ಬದ ಮೇಲೆ ಅಪಘಾತ ಸಂಭವಿಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ. ವಾಹನ ಚಾಲಕ ಪಟ್ಟಣದ ನಿವಾಸಿ ರಜಾಕಸಾಬ್ ಮಕಾನದಾರ (30) ಎಂದು ಗುರುತಿಸಲಾಗಿದ್ದು, ಸಿಪಿಐ ಶ್ರೀನಿವಾಸ ಮೇಟಿ, ಪಿಎಸ್ಐ ಆರ್.ಎಚ್. ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ವಾಹನ ಡಿಕ್ಕಿ: ಸಾವು
ನರಗುಂದ: ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಟಾಟಾ ಸುಮೊವೊಂದು ತಾಲೂಕಿನ ಭೈರನಹಟ್ಟಿ ಗ್ರಾಮದ ಸಮೀಪದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೃತನನ್ನು ಶಿವಕುಮಾರ ವೈಶಿಷ್ಯ (74) ಎಂದು ಗುರುತಿಸಲಾಗಿದೆ. ಇದರೊಟ್ಟಿಗೆ ವಾಹನದಲ್ಲಿ ಸಂಚರಿಸುತ್ತಿದ್ದ ಇನ್ನೂ 4 ಜನರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

