ಗುರುವಿಗೆ ಕಲ್ಮಶ, ಅಂಧಕಾರ ಕಳೆಯುವ ಶಕ್ತಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 10
ದೀಪ ಬಹಿರಂಗದ ಅಂಧಕಾರ ಕಳೆಯುವ ಶಕ್ತಿ ಹೊಂದಿರುವಂತೆ ಗುರು ನಮ್ಮೆಲ್ಲರ ಅಂತರಂಗದ ಮನಸ್ಸಿನ ಕಲ್ಮಶ, ಅಂಧಕಾರವನ್ನು ವಾಣಿಯ ಮೂಲಕ ಕಳೆಯುವವನಾಗಿದ್ದಾನೆ ಎಂದು ಸೂಡಿಯ ಜುಕ್ತಿ-ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಭಾನುವಾರ ರಾತ್ರಿ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿ-ಹಿರೇಮಠದಲ್ಲಿ 200ನೇ ಶಿವಾನುಭವ ಹಾಗೂ ಕಾರ್ತಿಕ ದೀಪೋತ್ಸವ ಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ತಿಕ ಅತ್ಯಂತ ಪವಿತ್ರ ಮಾಸ. ಈ ಮಾಸದಲ್ಲಿ ಮನೆ, ಮಂದಿರ, ಮಠಗಳಲ್ಲಿಯೂ ನಾವೆಲ್ಲರೂ ಭಕ್ತಿ, ಶ್ರಧ್ಧೆಯಿಂದ ದೀಪೋತ್ಸವ ಆಚರಿಸುತ್ತೇವೆ. ನಮ್ಮ ಪೂರ್ವಜರು ಹಾಕಿಕೊಟ್ಟ ನಡೆ-ನುಡಿ, ಸಂಸ್ಕೃತಿ ಸಂಪ್ರದಾಯ, ಭಕ್ತಿ, ಶ್ರದ್ಧೆಯಿಂದ ಪಾಲಿಸಿದಲ್ಲಿ ನಾಡಿಗೆ ಸುಖ, ಶಾಂತಿ, ಸಮೃದ್ಧಿ ನಿಶ್ಚಿತ ಎಂದು ಹೇಳಿದರು.
ಇಂದಿನ ದಿನಮಾನದಲ್ಲಿ ಧರ್ಮಕ್ಕೆ ಬೆಲೆ ಕೊಡದೆ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದಲ್ಲದೇ ಧರ್ಮಾನುಯಾಯಿಗಳೇ ಧರ್ಮವನ್ನು ಕಡೆಗಣಿಸುತ್ತಿರುವುದು ವಿಷಾದಕರವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾದಗಿ ಪಂಚಗೃಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, 84 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ಪವಿತ್ರವಾದುದು, ಮಠ-ಮಾನ್ಯಗಳಲ್ಲಿ ನಡೆಯುವ ಶಿವಾನುಭವ ಭಕ್ತರ ಉನ್ನತಿಗಾಗಿ ವಿನಃ ಸ್ವಾಮಿಯ ಉನ್ನತಿಗಾಗಿಯಲ್ಲ ಎಂದರು. ದೀಪಕ್ಕೆ ಎಣ್ಣೆಯೇ ಸಾಧನ, ಅದರಂತೆ ಮನುಷ್ಯನಿಗೆ ನಡೆ-ನುಡಿ, ಭಕ್ತಿ, ಸಂಸ್ಕೃತಿ, ಅಂತರಂಗಗಳೇ ಸಾಧನಗಳಾಗಿವೆ. ಭಕ್ತಿ ಪಕ್ವವಾಗದೇ ಗುರುದರ್ಶನ ಅಸಾಧ್ಯ. ಗುರುವಿನ ತಪಸ್ಸು ಭಕ್ತನಿಗಾಗಿ ಮೀಸಲು, ಪರಮಾತ್ಮನ ಸಾಕಾರ ರೂಪವೇ ಗುರು ಎಂದರು.
ಇದೇ ಸಂದರ್ಭದಲ್ಲಿ ಹಲವು ಮಹನೀಯರನ್ನು ಸನ್ಮಾನಿಸಲಾಯಿತು. ಎಸ್.ಆರ್. ಮಾರನಬಸರಿ, ಎಸ್.ಎಂ. ಹೂಗಾರ, ಶರಣಪ್ಪ ಕಾಶಪ್ಪನವರ, ಮಲ್ಲನಗೌಡ ದೇಸಾಯಿ, ಶಿವಾನಂದಯ್ಯ ಜುಕ್ತಿ-ಹಿರೇಮಠ, ಶ್ರೀಕಾಂತ ಮಾರನಬಸರಿ, ವಾಸುಗೌಡ ಪಾಟೀಲ, ಈಶಣ್ಣ ರೋಣದ, ಪ್ರಕಾಶ ಬೇಲಿ, ಚಂದ್ರಕಾಂತ ಹಿರೇಮಠ, ಶೇಖಣ್ಣ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು. ಉಮೇಶ ಗುಡಿಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

