ತುಂಗಾ ನೀರು ಅಮೃತಕ್ಕೆ ಸಮಾನ
ಕನ್ನಡಪ್ರಭ ವಾರ್ತೆ, ಗದಗ, ಡಿ. 11
ತುಂಗಾ ನೀರು ಅಮೃತಕ್ಕೆ ಸಮಾನ. ಈ ಭಾಗದ ಬಹುದಿನಗಳ ಬೇಡಿಕೆಯಾದ ನನ್ನ ವಾರ್ಡಿನ ಮತದಾರ ಬಂಧುಗಳಿಗೆ ನೀರನ್ನು ತರುವುದು ನನ್ನ ಆದ್ಯ ಕರ್ತವ್ಯವಾಗಿತ್ತು. ನೀರು ಎಲ್ಲರಿಗೂ ಬೇಕಾದಂತಹ ಶ್ರೇಷ್ಠ ವಸ್ತು. ನೀರಿಗೆ ಮತ್ತು ಪ್ರಕೃತಿಗೆ ಹೆಚ್ಚಿನ ಪ್ರಾತಿನಿದ್ಯ ಕೊಡಬೇಕು ಎಂದು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು.
ಅವರು ಮಂಗಳವಾರ ಸ್ಥಳೀಯ 21ನೇ ವಾರ್ಡಿನ ಎಲೆಗಾರ ಪ್ಲಾಟ್ನ ಹತ್ತಿರವಿರುವ ಮುನವಳ್ಳಿ ಪ್ಲಾಟ್ನಲ್ಲಿ ಸಾರ್ವಜನಿಕ ನಲ್ಲಿಯನ್ನು ಉದ್ಘಾಟಿಸಿ ಮಾತನಾಡಿದರು.
ಸುಮಾರು 10 ವರ್ಷಗಳಿಂದ ಈ ಸ್ಲಂ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿತ್ತು. ಈ ಕುರಿತು ನಗರಸಭೆಯೊಂದಿಗೆ ಚರ್ಚಿಸಿ, ಈ ಭಾಗದಲ್ಲಿ ಸಾರ್ವಜನಿಕ ನಲ್ಲಿಯನ್ನು ಆರಂಭಿಸುವ ಮೂಲಕ ಇಲ್ಲಿನ ಸಾರ್ವಜನಿಕರ ಹಲವು ದಿನಗಳ ಕನಸನ್ನು ನನಸು ಮಾಡಿದ ಸಂತಸ ನನಗಿದೆ. ಈ ಭಾಗದಲ್ಲಿ ಇನ್ನೂ ಹಲವಾರು ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿದ್ದು, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಸೇವೆ ಮಾಡುತ್ತೇನೆ ಎಂದರು.
ಜೇರಕಾ ಮುಲ್ಲಾ, ರಾಬಿನಾ ರಾಣೆಬೆನ್ನೂರ, ಮಾಬುಬಿ ಮುಲ್ಲಾನವರ, ಹುಸೇನಬಿ ತಹಸೀಲ್ದಾರ್, ಹಸೀನಾ ದುರಗಿಗುಡಿ, ಸುನೀತಾ ಮೇಹರವಾಡೆ, ಸೈನಾಜ ಮುಲ್ಲಾನವರ, ರಮೀಜಾ ಕೊಡತಗೇರಿ, ಶಮ್ಶಾದ ದೊಡ್ಡಮನಿ, ಅನಸೂಯಾ ದೊಡ್ಡಮನಿ, ನೂರಜಾನ್ ತಾಡಪತ್ರಿ, ಶಮ್ಶಾದ ಚಿನ್ನೂರ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

