ದಲಿತರ ಅಭಿವೃದ್ಧಿ ಕುಂಠಿತ
ಗದಗ: ದಲಿತರ ಬಾಳಿಗೆ ಬೆಳಕನ್ನು ಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶ ಪರಿಪಾಲನೆಯಲ್ಲಿ ದಲಿತ ಸಮೂಹ ಮನಸ್ಸು ಮಾಡದೇ ಇರುವುದಕ್ಕೆ ದಲಿತರ ಅಭಿವೃದ್ಧಿ ಕುಂಠಿತವಾಗಿದ್ದು, ಸಂಘಟನೆ ಕಟ್ಟುವಲ್ಲಿ ಮುಂದುವರಿಯದೆ ಇರುವುದು ವಿಷಾದಕರವಾಗಿದೆ. ಶೋಷಿತ ಜನಾಂಗಕ್ಕೆ ಡಾ. ಬಿ.ಆರ್.ಅಂಬೇಡ್ಕರವರ ಚೈತ್ಯ ಭೂಮಿ ಹಜ್ ಯಾತ್ರೆಯಷ್ಟೆ ಪವಿತ್ರ ಎಂದು ದಲಿತ ಮುಖಂಡ ಎಸ್.ಎನ್. ಲಿಂಗದಾಳ ಹೇಳಿದರು.
ಅವರು ಈಚೆಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ಕಾರ್ಯಕ್ರಮಕ್ಕೆ ಗದಗ-ಬೆಟಗೇರಿ ನಗರಸಭೆ ವತಿಯಿಂದ ಏರ್ಪಡಿಸಿದ ಬಸ್ ಮೂಲಕ ಚೈತ್ಯ ಭೂಮಿ ಚಲೋ ಮುಂಬೈ ದಾದರಕ್ಕೆ ತೆರಳುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲ ಜನಾಂಗದ ಜನತೆಯ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ಮಹಾನ್ ನಾಯಕರ ಪುಣ್ಯದಿನವನ್ನು ಮುಂಬೈನ ಚೈತ್ಯಭೂಮಿಯಲ್ಲಿ ಆಚರಿಸುತ್ತಿದ್ದು, ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. ನಗರಸಭೆ ಅಭಿಯಂತರ ಬಂಡಿವಡ್ಡರ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರವರು ದಲಿತ ಸಮುದಾಯ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ. ಅವರ ಪುಣ್ಯದಿನವನ್ನು ಮುಂಬೈಯಲ್ಲಿ ಭಾರತದ ಎಲ್ಲ ದಲಿತ ಸಮುದಾಯ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ಆದ್ದರಿಂದ ಪ್ರತಿಯೊಬ್ಬ ದಲಿತರು, ಡಾ. ಅಂಬೇಡ್ಕರ್ ಗದ್ದುಗೆ ದರ್ಶನ ಪಡೆದುಕೊಳ್ಳಬೇಕಾಗಿದೆ ಎಂದರು.
ಚಲವಾದಿ ಸಮಾಜದ ಮುಖಂಡ ಸತೀಶ ಹೂಲಿ, ಶಿಕ್ಷಕ ಎಸ್.ಎನ್.ಬಳ್ಳಾರಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರರು ದೇಶದ ಎಲ್ಲ ಜನಾಂಗಕ್ಕೂ ಮತ್ತು ಎಲ್ಲ ದಲಿತ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಿ ಎಲ್ಲರ ಬಾಳಲ್ಲಿ ಕವಿದಿದ್ದ ಕತ್ತಲನ್ನು ಸರಿಸಿದ್ದಾರೆ ಎಂದರು.
ರಾಜ್ಯ ಕಾರ್ಮಿಕ ಮಹಾಮಂಡಳದ ನಿರ್ದೇಶಕ ಎಂ.ಐ. ನವಲೂರು, ನಗರಸಭೆಯ ಅಭಿಯಂತರ ಲಿಂಗನಗೌಡ ಪತ್ತಾರ, ವಿಜಯ ಮುಳಗುಂದ, ಎಸ್.ವೈ. ಹೊನ್ನೂಂಗರ, ಅಶೋಕ ಹಾದಿಮನಿ, ಗಣೇಶ ಹುಬ್ಬಳ್ಳಿ, ಬಾಲರಾಜ ಅರಬರ, ಸೈಯದ್ ಕೊಪ್ಪಳ, ಓಬಳೇಶ ಯಶವಂತಪುರ, ಬಸವರಾಜ ಈರಣ್ಣವರ, ರಾಘವೇಂದ್ರ ಪರಾಪುರ, ಮಂಜುನಾಥ, ತೌಜಲ್, ಹನುಮಂತಪ್ಪ ಕಿನ್ನಾಳ, ಶಿವರಾಜ ಸಿಂದೆ, ವಿನಾಯಕ ಬಳ್ಳಾರಿ, ಅಪ್ಪು ಹಿತ್ತಲಮನಿ, ಶರಣಪ್ಪ ಕಡಿಯವರ, ಮಾಂತೇಶ ಕಡಿಯವರ, ಶಿವರಾಜ ಈರಣ್ಣವರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

